ಮಡಿಕೇರಿ, ಅ. 5: ಮುಂಗಾರಿನ ಭಾರೀ ಮಳೆಯಿಂದ ಸೃಷ್ಟಿಯಾದ ಪ್ರಾಕೃತಿಕ ವಿಕೋಪದಿಂದ ಮನೆಮಠಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ, ಉತ್ತಮ ಬದುಕಿನ ಭರವಸೆಯನ್ನು ತುಂಬುವ ಪ್ರಯತ್ನಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಒಳಗೊಂಡ ತಂಡ ಮುಂದಾಗಿದ್ದು, ‘ಬಾಳೋ ಬಾಳೋ ಜಬ್ಬೂಮಿ, ಕೊಡವಾಮೆಕ್ ಕಣ್ಣೀರ್’ ಘೋಷವಾಕ್ಯದೊಂದಿಗೆ ವಿವಿಧ ಪ್ರಾಕೃತಿಕ ವಿಕೋಪದ ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ, ನೊಂದವರ ಅಳಲನ್ನು ಆಲಿಸಿ ಸಾಂತ್ವನ ಹೇಳುವ ಕಾರ್ಯ ನಡೆಸಿದೆ.
ಮಹಾತ್ಮ ಗಾಂಧಿ ಜಯಂತಿ ಯಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಮತ್ತು ಅಕಾಡೆಮಿ ಸದಸ್ಯರು ಮಕ್ಕಂದೂರಿನ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಬೆಳಗ್ಗಿ ನಿಂದ 11 ಗಂಟೆಯವರೆಗೆ ಸ್ವಚ್ಛತಾ ಶ್ರಮದಾನ ನಡೆಸಿದರು. ಬಳಿಕ ಹಾನಿ ಪೀಡಿತ ಪ್ರದೇಶಗಳತ್ತ ಸಾಗಿ, ಅಲ್ಲಿನ ಸಂತ್ರಸ್ತರನ್ನು ಖುದ್ದು ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದರು.ಮಡಿಕೇರಿ, ಅ. 5: ಮುಂಗಾರಿನ ಭಾರೀ ಮಳೆಯಿಂದ ಸೃಷ್ಟಿಯಾದ ಪ್ರಾಕೃತಿಕ ವಿಕೋಪದಿಂದ ಮನೆಮಠಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ, ಉತ್ತಮ ಬದುಕಿನ ಭರವಸೆಯನ್ನು ತುಂಬುವ ಪ್ರಯತ್ನಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಒಳಗೊಂಡ ತಂಡ ಮುಂದಾಗಿದ್ದು, ‘ಬಾಳೋ ಬಾಳೋ ಜಬ್ಬೂಮಿ, ಕೊಡವಾಮೆಕ್ ಕಣ್ಣೀರ್’ ಘೋಷವಾಕ್ಯದೊಂದಿಗೆ ವಿವಿಧ ಪ್ರಾಕೃತಿಕ ವಿಕೋಪದ ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ, ನೊಂದವರ ಅಳಲನ್ನು ಆಲಿಸಿ ಸಾಂತ್ವನ ಹೇಳುವ ಕಾರ್ಯ ನಡೆಸಿದೆ.
ಮಹಾತ್ಮ ಗಾಂಧಿ ಜಯಂತಿ ಯಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಮತ್ತು ಅಕಾಡೆಮಿ ಸದಸ್ಯರು ಮಕ್ಕಂದೂರಿನ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಬೆಳಗ್ಗಿ ನಿಂದ 11 ಗಂಟೆಯವರೆಗೆ ಸ್ವಚ್ಛತಾ ಶ್ರಮದಾನ ನಡೆಸಿದರು. ಬಳಿಕ ಹಾನಿ ಪೀಡಿತ ಪ್ರದೇಶಗಳತ್ತ ಸಾಗಿ, ಅಲ್ಲಿನ ಸಂತ್ರಸ್ತರನ್ನು ಖುದ್ದು ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದರು.
ಬಳಿಕ ತಮಗೆ ಪ್ರಾಥಮಿಕ ಹಂತದಲ್ಲಿ ದೊರಕಬೇಕಾಗಿದ್ದ ನೆರವು ಸಮರ್ಪಕವಾಗಿ ದೊರತ್ತಿಲ್ಲ. ಸರ್ಕಾರ ಸಂತ್ರಸ್ತರಿಗೆ ಕೊಡಮಾಡಿರುವ 3800 ರೂ. ಪರಿಹಾರ ನಿರಾಶ್ರಿತರಿಗೆ ಸಮರ್ಪಕವಾಗಿ ದೊರಕಿಲ್ಲವೆಂದು ತಮ್ಮ ಅಳಲು ತೋಡಿಕೊಂಡ ಘಟನೆಯೂ ನಡೆಯಿತು.
ಅಕಾಡೆಮಿಯ ಮಾಜಿ ಸದಸ್ಯೆ ಮುಕ್ಕಾಟಿರ ತಂಗಮ್ಮ ಅವರನ್ನು ಅಕಾಡೆಮಿ ತಂಡ ಭೇಟಿಯಾಗಿ ಸಾಂತ್ವನ ನುಡಿಯಿತು. ಪ್ರಾಕೃತಿಕ ವಿಕೋಪದಲ್ಲಿ ತಂಗಮ್ಮ ಅವರ ಪತಿ ಸಾಬು ಅವರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ನೊಂದ ತಂಗಮ್ಮ ಅವರಿಗೆ ಬದುಕಿನ ಬಗ್ಗೆ ವಿಶ್ವಾಸ ತುಂಬುವ ಪ್ರಯತ್ನವನ್ನು ಅಕಾಡೆಮಿ ತಂಡ ಮಾಡಿತು.
ಮನೆ ಬೇಕು: ಪ್ರಾಕೃತಿಕ ವಿಕೋಪದಿಂದ ಜರ್ಜರಿತವಾಗಿರುವ ಮೂವತ್ತೊಕ್ಲು, ಶಿರಂಗಳ್ಳಿ ಗ್ರಾಮಗಳಿಗೆ ಅಕಾಡೆಮಿ ತಂಡ ಭೇಟಿ ನೀಡಿದ ಸಂದರ್ಭ, ಗುಡ್ಡ ಕುಸಿತದ ಪ್ರಾಕೃತಿಕ ವಿಕೋಪಗಳಿಂದ ಮಳೆಗಾಲದ ಅವಧಿಯಲ್ಲಿ ಮತ್ತೆ ತಮ್ಮ ಗ್ರಾಮಗಳಲ್ಲಿ ವಾಸಿಸುವದು ಅಸಾಧ್ಯವೆಂದು ಸಂತ್ರಸ್ತರು ಅಳಲು ತೋಡಿಕೊಂಡರು. ತಮಗೆ ಮಾದಾಪುರದ ತೋಟಗಾರಿಕೆÀ ಜಾಗದಲ್ಲಿ ನಿವೇಶನ ಮತ್ತು ಮನೆಯನ್ನು ಒದಗಿಸಿಕೊಟ್ಟಲ್ಲಿ, ಅಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುವದ ರೊಂದಿಗೆ, ಅಲ್ಲಿದ್ದುಕೊಂಡು ಗ್ರಾಮದಲ್ಲಿ ಉಳಿದಿರುವ ತಮ್ಮ ಆಸ್ತಿ ಪಾಸ್ತಿಗಳನ್ನು ನಿರ್ವಹಣೆ ಮಾಡಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಗ್ರಾಮೀಣ ಭಾಗಗಳಿಗೆ ಅಕಾಡೆಮಿ ಸದಸ್ಯ ಹಂಚೆಟ್ಟಿರ ಮನು ಮುದ್ದಯ್ಯ ಅವರ ಮುಂದಾಳತ್ವದಲ್ಲಿ ತೆರಳಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತಂಡದಲ್ಲಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅವರೊಂದಿಗೆ ಸದಸ್ಯರುಗಳಾದ ಅಮ್ಮುಣಿಚಂಡ ಪ್ರವೀಣ್, ಉಮೇಶ್ ಕೇಚಮ್ಮಯ್ಯ, ಬೀಕಚಂಡ ಬೆಳ್ಯಪ್ಪ, ಬೊಳ್ಳಾಜಿರ ಅಯ್ಯಪ್ಪ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಆಂಗೀರ ಕುಸುಮ್, ಚಂಗುಲಂಡ ಸೂರಜ್, ಸುಳ್ಳಿಮಾಡ ಭವಾನಿ, ಹೆಚ್. ಗಣಪತಿ, ಕುಡಿಯರ ಶಾರದ, ಆಪಟ್ಟಿರ ಟಾಟು ಮೊಣ್ಣಪ್ಪ, ಅಜ್ಜಮಾಡ ಕುಶಾಲಪ್ಪ ಅವರುಗಳಿದ್ದರು.