ಮಡಿಕೇರಿ ಅ. 5: ಮಡಿಕೇರಿ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಣ್ಣಪುಲಿಕೋಟು, ಪೊದ್ದಮಾನಿ, ಚೆರಿಯಪರಂಬು, ಎಮ್ಮೆಮಾಡು-1, ಕೀಮಲೆಕಾಡು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರ ಹುದ್ದೆ ಖಾಲಿಯಿದೆ. ಆರ್ಮಿ ಕ್ಯಾಂಟಿನ್, ವಣಚಲು, ಪಾಲೂರು, ಎಂ. ಬಾಡಗ-2, ಹೊದವಾಡ-1, ಕೊಟ್ಟಮುಡಿ-2, ಕಾರುಗುಂದ ಕಾಲೋನಿ, ಎಡಪಾಲ-1, ಕಿಕ್ಕರೆ, ಕಬ್ಬಿನಕಾಡು, ಬಾವಲಿ-1, ಕ್ಲೋಸ್‍ಬರ್ನ್, ಅಮ್ಮಂಗೇರಿ, ಭಗವತಿನಗರ, ಬಾವಲಿ-2, ಬಾಣೆಮೊಟ್ಟೆ, ಯು. ಚೆಂಬು-1, ಹಮ್ಮಿಯಾಲ, ಪನೆಡ್ಕ, ತೊತ್ತಿಯಂಡಬಾರಿಕೆ, ಮುಕ್ಕೋಡ್ಲು-1, ಕೋಡಿಮೊಟ್ಟೆ, ಮಹದೇವಪೇಟೆ, ಮರಗೋಡು ಬಕ್ಕ ಇಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದೆ.

ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ತಾ. 30 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ 4ರಿಂದ 9ನೇ ತರಗತಿಯವರೆಗೆ ವ್ಯಾಸಂಗ ಮಾಡಿರಬೇಕು. 18ರಿಂದ 35 ವರ್ಷ ವಯೋಮಿತಿಯೊಳಗಿರುವ ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವೆಬ್‍ಸೈಟ್ ತಿತಿತಿ.ಚಿಟಿgಚಿಟಿತಿಚಿಜiಡಿeಛಿಡಿuiಣ.ಞಚಿಡಿ.ಟಿiಛಿ.iಟಿನಲ್ಲಿ ಅರ್ಜಿಯನ್ನು ಭರ್ತಿ ಮಾಡಬಹುದಾಗಿದೆ. ಆನ್‍ಲೈನ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿದ್ದು, ಇತರ ಯಾವದೇ ರೂಪದ ಅರ್ಜಿಗಳನ್ನು ಯಾವದೆ ಕಾರಣಕ್ಕೂ ಪರಿಗಣಿಸುವದಿಲ್ಲ. ಹೆಚ್ಚಿನ ಮಾಹಿತಿಗಾಗಿ 08272-228197 ದೂರವಾಣಿಯನ್ನು ಸಂಪರ್ಕಿಸಬಹುದು.