ಮಡಿಕೇರಿ, ಅ.5 : ಬೆಂಗಳೂರಿನ ಪ್ರಜಾಟ್ರಸ್ಟ್ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಸಂತ್ರಸ್ತರಿಗೆ ನೆರವು ಒದಗಿಸುವದಾಗಿ ಮಂಡ್ಯದ ಡಿ.ಹೆಚ್.ಕಿರಣ್ ಗೌಡ ಅವರು ತಿಳಿಸಿದ್ದಾರೆ.ಅತಿವೃಷ್ಟಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕಾಲೂರು ಗ್ರಾಮದ ಸಂತ್ರಸ್ತರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು. ಕೊಡಗು ಯೋಧರ ನಾಡು, ವಿಶಿಷ್ಟ ಸಂಸ್ಕøತಿಯ ತವರು. ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜಿಲ್ಲೆಯ ಜನ ನೋವಿನ ಸನ್ನಿವೇಶವನ್ನು ಎದುರಿಸುತ್ತಿದ್ದು, ಇಡೀ ವಾತಾವರಣವೇ ದು:ಖಮಯವಾಗಿದೆ. ಎಲ್ಲವನ್ನು ಕಳೆದುಕೊಂಡವರಿಗೆ ಸಹಾಯ ಹಸ್ತ ಚಾಚಬೇಕು ಎನ್ನುವ ಉದ್ದೇಶದಿಂದ ನಮ್ಮ ಸಂಸ್ಥೆಯು ಕಾಲೂರು, ಹಟ್ಟಿಹೊಳೆ, ಮಾದಾಪುರ, ಮುಕ್ಕೋಡ್ಲು ಗ್ರಾಮಗಳಿಗೆ ಭೇಟಿ ನೀಡಿ ಆಹಾರ ಸಾಮಗ್ರಿಗಳನ್ನು ವಿತರಿಸಿರುವದಾಗಿ ಹೇಳಿದರು.

ಶ್ರೀಓಂಕಾರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷÀ ಪುಲಿಯಂಡ ಜಗದೀಶ್ ಮಾತನಾಡಿ ಆಯ್ದ ಕುಟುಂಬಗಳ ಜಮೀನಿನ ನಿರ್ವಹಣೆಯ ಹೊಣೆಗಾರಿಕೆಯನ್ನು ಸಂಘ ಸಂಸ್ಥೆಗಳು ವಹಿಸಿಕೊಂಡರೆ ಸಂಕಷ್ಟದಲ್ಲಿರುವ ಸ್ಥಳೀಯರು ವಲಸೆ ಹೋಗುವದನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕÀ ತೆನ್ನಿರಮೈನಾ, ವೀರಾಜಪೇಟೆ ಪ.ಪಂ ಸದಸ್ಯ ಡಿ.ಪಿ. ರಾಜೇಶ್, ತುಳುವೆರ ಜನಪದ ಕೂಟದ ತಾಲೂಕು ಅಧ್ಯಕ್ಷ ಪ್ರಭುರೈ, ಯುವ ಮುಖಂಡ ಚೆನ್ನಪಂಡ ನರೇನ್, ಟ್ರಸ್ಟ್‍ನ ಪದಾಧಿಕಾರಿಗಳಾದ ಡಿ.ಕೆ.ಮೋಹನ್ ಕುಮಾರ್, ಕುಮಾರ್ ಕೊಪ್ಪ, ಎಂ.ರಾಮಕೃಷ್ಣ, ಸತೀಶ್ ಕುಮಾರ್, ಕೆ.ಡಿ.ಕಾಂತರಾಜು ಈ ಸಂದರ್ಭ ಹಾಜರಿದ್ದರು.