ಸೋಮವಾರಪೇಟೆ, ಅ. 5: ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಕೆ.ಕೆ. ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಪಿ.ರಾಜು ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಎಂ.ಕೆ. ಶ್ರೀನಿವಾಸಾಚಾರ್, ಖಜಾಂಚಿಯಾಗಿ ಎಸ್.ಜೆ. ದೇವದಾಸ್, ಸಹಕಾರ್ಯದರ್ಶಿಯಾಗಿ ಪಿ.ಕೆ. ಲೋಕೇಶ್, ಎಸ್.ಎ. ಲೋಹಿತಾಶ್ವ, ಸಾಂಸ್ಕøತಿಕ ವಿಭಾಗದ ನಿರ್ದೇಶಕರಾಗಿ ಎಂ.ಎಸ್. ಪುರುಷೋತ್ತಮ್ ಆಯ್ಕೆಯಾಗಿದ್ದಾರೆ.
ಮಹಿಳಾ ಘಟಕದ ಅಧ್ಯಕ್ಷರಾಗಿ ಶಾಂತಿ ದೇವದಾಸ್, ಉಪಾಧ್ಯಕ್ಷರಾಗಿ ವಸಂತಿ ಲೀಲಾರಾಂ, ಕಾರ್ಯದರ್ಶಿಯಾಗಿ ಶೋಭ ಯಶವಂತ್, ಖಜಾಂಚಿಯಾಗಿ ಜ್ಯೋತಿ ಹರೀಂದ್ರ, ಸಹ ಕಾರ್ಯದರ್ಶಿಯಾಗಿ ಅಮಿತ ಪ್ರದೀಪ್ ಆಯ್ಕೆಯಾಗಿದ್ದಾರೆ.
ಮಹಿಳಾ ಸಮಾಜದಲ್ಲಿ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ವಿಶ್ವಕರ್ಮ ಪೂಜಾ ಮಹೋತ್ಸವದಲ್ಲಿ ನೂತನ ಸಾಲಿಗೆ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.