ಸುಂಟಿಕೊಪ್ಪ, ಅ. 5: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನ ದಡಿಯಲ್ಲಿ ಸುಂಟಿಕೊಪ್ಪ ವಲಯಕ್ಕೆ ಸಂಬಂಧಿಸಿದಂತೆ ಸೋಲಾರ್ ಅನುಷ್ಠಾನ ಮಾಡಿದ ಕುಟುಂಬಗಳಿಗೆ ಅನುದಾನವನ್ನು ವಿತರಿಸಲಾಯಿತು.
ಇಲ್ಲಿನ ಗುಂಡುಗುಟ್ಟಿ ಮಂಜು ನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ತಾಲೂಕು ಯೋಜನಾಧಿಕಾರಿ ಪ್ರಕಾಶ್ ವೈ ಆಗಮಿಸಿ ಕಳೆದ 20 ವರ್ಷಗಳಿಂದ ಸೆಲೇ ಸೋಲಾರ್ ಸಂಸ್ಥೆಯವರು ವೇದಿಕೆಯ ಮುಖಾಂತರ ಸೋಲಾರ್ ದೀಪಗಳನ್ನು ಅನುಷ್ಠಾನ ಮಾಡಲಾ ಗುತ್ತಿದ್ದು ಯೋಜನೆಯಿಂದ ಆಗುವ ಕಾರ್ಯಕ್ರಮಗಳು ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ನಡೆಸಲಾಗುತ್ತಿದೆ. ಸ್ವ ಉದ್ಯೋಗ ಪೂರಕ ಚಟುವಟಿಕೆಗಳಿಗೆ ಸಾಲ ಸೌಲಭ್ಯಗಳನ್ನು ತರಬೇತಿ ಆಯೋಜನೆ ಮಾಡಲಾಗುತ್ತಿದೆ ಎಲ್ಲಾ ಕಾರ್ಯ ಕ್ರಮಗಳು ನೇರವಾಗಿ ಜನರಿಗೆ ತಲಪುತ್ತದೆ ಎಂದರು. ಮಾಜಿ ಅಧ್ಯಕ್ಷರು ಸುಂಟಿಕೊಪ್ಪ ದಂತ ವೈದ್ಯಾಧಿಕಾರಿ ಡಾ. ಶಶಿಕಾಂತ ರೈ ಅವರು ಸೋಲಾರ್ ಘಟಕಗಳ ಪ್ರೋತ್ಸಾಹ ಧನ ವಿತರಣೆ ಮಾಡುತ್ತಿರುವದು ಉತ್ತಮ ವಿಚಾರವಾಗಿದೆ. ಸ್ವಸಹಾಯ ಸಂಘಗಳ ಜೊತೆಗೆ ಸ್ವ ಉದ್ಯೋಗಕ್ಕೆ ಪೂರಕ ಚಟುವಟಿಕೆ ಸೋಲಾರ್ ಆಧಾರಿತ ಸ್ವ ಉದ್ಯೋಗಗಳು ಸೋಲಾರ್ ಲೈಟ್ಗಳು, ವಾಟರ್ ಹೀಟರ್ಗಳು ಕಡಿಮೆ ಖರ್ಚಿನಲ್ಲಿ ಹೆಚ್ಚು ಪ್ರಯೋಜನ ಯಾವದೇ ಖರ್ಚುಗಳಿಲ್ಲದೆ ಉಪಯೋಗಿಸಬಹುದಾಗಿದೆ. ಕೊಡಗು ಮಳೆ ಹಾನಿಯಿಂದ ತತ್ತರಿಸಿದ ಪ್ರದೇಶದ ಜನತೆಗೆ 10 ಕೋಟಿ ಪರಿಹಾರ ನೀಡುತ್ತಿರುವದು ಸುಂಟಿಕೊಪ್ಪದ ಜನತೆಯು ಶ್ಲಾಘನೆ ವ್ಯಕ್ತಪಡಿಸು ವಂತಾಗಬೇಕೆಂದು ಶಶಿಕಾಂತ ರೈ ನುಡಿದರು. ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಸ್ವಾವಲಂಬನೆಯ ಬದುಕು ರೂಪಿಸಿ ಕೊಳ್ಳುವಲ್ಲಿ ಹಾಗೂ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವದರ ಜೊತೆಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿರುತ್ತದೆ. ಮುಖ್ಯವಾಗಿ ಮಹಿಳೆಯರು ಹಿಂದೆ ಇದ್ದ ಜೀವನ ಶೈಲಿಗೂ ಈಗಿನ ಶೈಲಿಗೂ ಕೆಲಸ ಕಾರ್ಯಗಳು ನೋಡಿದಾಗ ಬಹುತೇಕ ಬದಲಾವಣೆ ಗಳನ್ನು ಕಾಣಬಹುದಾಗಿದೆ ಎಂದರು. ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಕನಕಮಣಿ ಹಾಗೂ ಸೇವಾ ಪ್ರತಿನಿಧಿಗಳು ಹಾಗೂ ಒಕ್ಕೂಟ ಅಧ್ಯಕ್ಷರುಗಳು ಸದಸ್ಯರು ಇದ್ದರು.