ವೀರಾಜಪೇಟೆ, ಅ. 5: ಸಮಾಜದ ಸದಸ್ಯರುಗಳ ಪರಸ್ಪರ ಸಹಕಾರದಿಂದ ಮೈತಾಡಿ ಗ್ರಾಮದ ಮಂದತಮ್ಮೆ ಮಹಿಳಾ ಸಮಾಜವನ್ನು ಎಲ್ಲ ರೀತಿಯಿಂದಲೂ ಪ್ರಗತಿಯತ್ತ ಮುನ್ನಡೆಸಲಾಗುವದು ಎಂದು ಸಮಾಜದ ಅಧ್ಯಕ್ಷೆ ಕುಂಞÂೀರ ಸ್ವಾತಿ ಸನ್ನಿ ಹೇಳಿದರು.
ಮಂದತಮ್ಮೆ ಮಹಿಳಾ ಸಮಾಜದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಸಮಾಜದ ಸರ್ವಾಂಗೀಣ ಪ್ರಗತಿಗೆ ಮಹಿಳಾ ಸಮಾಜ ಸದಸ್ಯರುಗಳ ಸಹಕಾರವನ್ನು ನಿರೀಕ್ಷಿಸುತ್ತದೆ. ಸಮಾಜದ ಪ್ರಗತಿ, ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ ಎಂದರು.
ವೇದಿಕೆಯಲ್ಲಿ ಅತಿಥಿಗಳಾಗಿ ಕಾಫಿ ಬೆಳೆಗಾರರು ಹಾಗೂ ಸಮಾಜ ಸೇವಕರು ಆದ ಸಣ್ಣುವಂಡ ಪೂವಮ್ಮ ಮೇದಪ್ಪ, ಐಚೆಟ್ಟೀರ ಸುಂದರಿ ಮೋಹನ್, ಕುಂಡಚ್ಚಿರ ಜಾಜಿ ಮುತ್ತಣ್ಣ, ಬಾಳೆಕುಟ್ಟೀರ ನಂಜವ್ವ ಗಣಪತಿ ಉಪಸ್ಥಿತರಿದ್ದರು.
ಸಭೆಯಲ್ಲಿ ಕಳೆದ ಸಾಲಿನ ಮಹಾಸಭೆಯ ವರದಿಯನ್ನು ಕುಂಡಚ್ಚಿರ ತಾರಾ ಗಣೇಶ್, ಆಡಳಿತ ಮಂಡಳಿಯ ವರದಿಯನ್ನು ಬಾಳೆಕುಟ್ಟೀರ ಕಲ್ಪನಾ ಕಾರ್ಯಪ್ಪ, ಮರಣ ನಿಧಿಯ ವರದಿಯನ್ನು ಶೀಲಾ ಉತ್ತಯ್ಯ ಹಾಗೂ ಖರ್ಚು ವೆಚ್ಚದ ವರದಿಯನ್ನು ಐಚೆಟ್ಟಿರ ಕುಸುಮಾ ವಸಂತ್ ಮಂಡಿಸಿದರು.
ಚಪ್ಪಂಡ ಲಲಿತಾ ನಂಜಪ್ಪ ಅವರಿಂದ ಪ್ರಾರ್ಥನೆ, ಐಚೆಟ್ಟೀರ ಮೀನಾ ಸತೀಶ್ ಅವರಿಂದ ಸ್ವಾಗತ ಕಲ್ಪನಾ ವಂದಿಸಿದರು.