ಸೋಮವಾರಪೇಟೆ,ಅ.5: ಸಮೀಪದ ಹುದುಗೂರು ಶ್ರೀ ಉಮಾಮಹೇಶ್ವರ ಕ್ಷೇತ್ರದ ನವರಾತ್ರಿ ಪೂಜೆ ತಾ.10 ರಿಂದ 18ರವರೆಗೆ ನಡೆಯಲಿದೆ. ವಿಶೇಷವಾಗಿ 16ರ ಮಂಗಳವಾರ ಬೆಳಿಗ್ಗೆ ದೇವಾಲಯದಲ್ಲಿ ಮೃತ್ಯುಂಜಯ ಹೋಮ ತದನಂತರ ಚಂಡಿಕಾ ಹೋಮ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಇರುತ್ತದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.