ಕುಶಾಲನಗರ, ಅ. 5: ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ವಿಮಾನ ಗೋಪುರದ ಜೀರ್ಣೋದ್ಧಾರ ಮತ್ತು ಗಣಪತಿ, ನವಗ್ರಹ ದೇವಾಲಯ ನಿರ್ಮಾಣ ಕಾರ್ಯ ಹಮ್ಮಿಕೊಳ್ಳಲಾಗಿದೆ. ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಜೀರ್ಣೋದ್ಧಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಭಕ್ತಾದಿಗಳು ದೇವಾಲಯದ ಅಭಿವೃದ್ಧಿಗಾಗಿ ಕೊಪ್ಪ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕ್ ಖಾತೆ ಸಂಖ್ಯೆ 85042908272ಗೆ ಧನ ಸಹಾಯ ಮಾಡುವಂತೆ ಸಮಿತಿಯ ಪ್ರಮುಖರು ಕೋರಿದ್ದಾರೆ.