*ಗೋಣಿಕೊಪ್ಪ, ಅ. 4: ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಹಾತೂರು ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು ಹಾಗೂ ನೌಕರರು ತಮ್ಮ ಒಂದು ತಿಂಗಳ ಗೌರವ ಭತ್ಯೆಯನ್ನು ನೀಡಿದರು.
25 ಸಾವಿರ ರೂಪಾಯಿ ಚೆಕ್‍ನ್ನು ಕಾಲೂರು ಗ್ರಾಮದ ನಿವಾಸಿ ಶೈಲಾ ನೀಲಮ್ಮ ಅವರ ಪತಿಯ ಚಿಕಿತ್ಸೆಗಾಗಿ ಅಧ್ಯಕ್ಷೆ ಜಯಂತಿ ನೀಲಮ್ಮ ಅವರಿಗೆ ಚೆಕ್‍ನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಗುಮ್ಮಟ್ಟಿರಾ ದರ್ಶನ್ ನಂಜಪ್ಪ, ಪ್ರಕೃತಿ ವಿಕೋಪದಿಂದ ನಮ್ಮ ಬಂಧುಗಳ ಜೀವನವೇ ಅತಂತ್ರವಾಗಿದೆ. ನೆಲೆ ಕಳೆದುಕೊಂಡು ಮತ್ತೆ ಹೊಸ ಬದುಕು ರೂಪಿಸಲು ಹವಣಿಸುತ್ತಿದ್ದಾರೆ. ಇಂತಹ ನೆರೆ ಸಂತ್ರಸ್ತರ ಬದುಕು ಕಟ್ಟಿಕೊಡಲು ಗ್ರಾ.ಪಂ. ಸದಸ್ಯರು ಹಾಗೂ ಸಿಬ್ಬಂದಿಗಳು ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.
ಸದಸ್ಯರುಗಳಾದ ಸುಭಾಷ್, ಮ್ಯಾಥ್ಯೂ, ಪೂವಣ್ಣ, ಆಶಾಲತಾ, ಕುಲ್ಲಚಂಡ ಚಿಣ್ಣಪ್ಪ ಸೇರಿದಂತೆ ಪಿ.ಡಿ.ಓ. ನೌಕರರು ಹಾಜರಿದ್ದರು.
 
						