ಮಡಿಕೇರಿ, ಅ. 4: ಇತ್ತೀಚೆಗೆ ತಾರಿಕಟ್ಟೆ ಅಂಗನವಾಡಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪೌಷ್ಟಿಕ ಸಪ್ತಾಹ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯೆ ಪೊನ್ನಮ್ಮ ವಹಿಸಿದ್ದರು.

ಮಾತೃಪೂರ್ಣ, ಮಾತೃವಂದನ ಮತ್ತು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕರ್ತೆಯರಾದ ವೆಂಕಮ್ಮ ಸ್ವಾಗತಿಸಿದರು. ವಿನ್ಯಾ ವಂದನಾರ್ಪಣೆ ಮಾಡಿದರು. ಕಾರ್ಯಕರ್ತೆಯರಾದ ಸತ್ಯಬಾಮ, ಮೀನಾಕ್ಷಿ, ಅಶ್ವಿನಿ, ಬೋಜಿ, ಮೀನಾಕುಮಾರಿ, ಸಹಾಯಕಿಯರಾದ ಸವಿತ, ವನಿತ, ಪ್ರೇಮ ಶಾಂತಿ, ಬೇಬಿ, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.