ವೀರಾಜಪೇಟೆ: ವಿಶ್ವಕಂಡ ಮಹಾನ್ ನಾಯಕರ ಆತ್ಮಚರಿತ್ರೆಯನ್ನು ನಮ್ಮ ಇಂದಿನ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು. ಇಂದಿನ ಯುವ ಪೀಳಿಗೆಗೆ ತಿಳಿಸುವಂತಾಗಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಹೇಳಿದರು.
ಇಲ್ಲಿನ ಪುರಭವನದಲ್ಲಿ ಪಟ್ಟಣ ಪಂಚಾಯಿತಿಯಿಂದ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ 100 ವರ್ಷಗಳ ಪರಿಕಲ್ಪನೆ, ಸಾಮಾಜಿಕ ಸೇವೆಗಳು, ಗ್ರಾಮ ಸಡಾಕ್ ಯೋಜನೆಗಳು ಸೇರಿದಂತೆ ಹಲವಾರು ಯೋಜನೆಗಳು ಇಂದು ಅನುಷ್ಠಾನಗೊಳ್ಳುತ್ತಿದೆ. ಅವರ ಆದರ್ಶ ಗುಣಗಳನ್ನು ಹಾಗೂ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಭಿಯಂತರ ಹೇಮ್‍ಕುಮಾರ್ ಮಾತನಾಡಿ, ಮಹಾನ್ ವ್ಯಕ್ತಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಅವರಲ್ಲಿದ್ದ ಉದ್ದೇಶಗಳನ್ನು ಈಡೇರಿಸಿಕೊಳ್ಳುವದರಲ್ಲಿ ಸಫಲರಾಗಿದ್ದಾರೆ. ಬ್ರಿಟೀಷರ ಒಡೆದು ಆಳುವ ನೀತಿಯನ್ನು ವಿರೋಧಿಸಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಗಾಂಧೀಜಿ ಅವರು ನಮಗೆ ಸ್ವಾತಂತ್ರ್ಯ ತಂದು ಕೊಟ್ಟರು. ಅಂತಹ ಮಹನೀಯರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದು ಹೇಳಿದರು. 
ಸೋಮವಾರಪೇಟೆ: ಜ್ಞಾನಕ್ಕೆ ಪ್ರಾರಂಭ ಮತ್ತು ಅಂತ್ಯವಿಲ್ಲ. ಯುವಶಕ್ತಿ ಜ್ಞಾನವನ್ನು ಸಂಪಾದಿಸಿಕೊಂಡು ದೇಶದ ಸಂಪತ್ತಾಗಿ ಬೆಳೆಯಬೇಕು. ವಿದ್ಯಾರ್ಥಿಗಳು ಶಿಸ್ತಿನೊಂದಿಗೆ ನೈತಿಕ ಶಕ್ತಿಯನ್ನು ಬೆಳಸಿಕೊಂಡು, ಗಾಂಧೀಜಿಯವರ ಆದರ್ಶಗಳು ಹಾಗೂ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಹೇಳಿದರು.
ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಾಲೂಕು ಒಕ್ಕಲಿಗರ ಸಂಘದ ಬಿ.ಟಿ.ಸಿ.ಜಿ. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಮತ್ತು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರ ಕನಸು ದೇಶದಲ್ಲಿ ನನಸಾಗುತ್ತಿಲ್ಲ. ರಾಮ ರಾಜ್ಯದ ಹೆಸರಿನಲ್ಲಿ ಪ್ರಜಾಪ್ರುಭುತ್ವದ ಹಳಿ ತಪ್ಪಿಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ತಂತ್ರಗಳನ್ನು ನಡೆಸಲಾಗುತ್ತಿದೆ. ಬಹುತೇಕ ರಾಜಕಾರಣಿಗಳು ಹಣ ಮಾಡಿಕೊಳ್ಳುತ್ತಿದ್ದಾರೆ. ಹಣದಿಂದ ಮಾತ್ರ ಅಧಿಕಾರವನ್ನು ಪಡೆಯಲು ಸಾಧ್ಯ ಎನ್ನುತ್ತಿದ್ದಾರೆ ಎಂದು ವಿಷಾದಿಸಿದರು.
ಮುಖ್ಯ ಅತಿಥಿಗಳಾಗಿದ್ದ ಡಿವೈಎಸ್‍ಪಿ ಮುರುಳೀಧರ್ ಮಾತನಾಡಿ, ಗಾಂಧೀಜಿಯವರ ಕನಸಿನ ಭಾರತದಲ್ಲಿ ನಾವಿದ್ದೇವೆ. ಆದರೆ ಅವರ ಕನಸು ನನಸ್ಸಾಗಿಲ್ಲ. ವಿದ್ಯಾರ್ಥಿ ನಾಯಕರ ನೇತೃತ್ವದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟ ನಡೆದಿದೆ. ದೇಶದ ಬದಲಾವಣೆ ಯುವಜನತೆಯಿಂದ ಆಗಬೇಕು ಎಂದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಸಂಘದ ಸಂಚಾಲಕ ಕೆ.ಎನ್. ಜಗದೀಶ್, ನಿರ್ದೇಶಕರುಗಳಾದ ಶಿವಯ್ಯ, ಕೆ.ಟಿ. ಪರಮೇಶ್, ಸ್ಪಂದನ ಗ್ರಾಮೀಣ ಶಿಕ್ಷಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಹೆಚ್.ಆರ್. ಸುರೇಶ್, ನಿರ್ದೇಶಕ ಹೆಚ್.ಸಿ. ರಾಮಪ್ರಸಾದ್, ಕಾಲೇಜಿನ ಪ್ರಾಂಶುಪಾಲ ಹೆಚ್.ಎಸ್. ಶರಣ್ ವಿದ್ಯಾರ್ಥಿ ಪರಿಷತ್ ಸಂಯೋಜಕ ಜಿ.ಕೆ. ಯೋಗೇಶ್, ವಿದ್ಯಾರ್ಥಿ ನಾಯಕ ನವಾಜ್ ಇದ್ದರು.
ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಪುಷ್ಪಾರ್ಚನೆ ಮಾಡಿದರು. ನಂತರ ಗಾಂಧಿ ಜಯಂತಿ ಅಂಗವಾಗಿ ಶ್ರಮದಾನ ಮಾಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯೆಷಾ ಹಾಗೂ ಸಿಬ್ಬಂದಿ ವರ್ಗ ಇದ್ದರು.
ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಪುಷ್ಪಾರ್ಚನೆ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್‍ಕುಮಾರ್, ಸದಸ್ಯರಾದ ಜಯಶ್ರಿ, ಪುಷ್ಪ, ಚಂದ್ರಿಕ, ಕಾರ್ಯದರ್ಶಿ ಶಿಲ್ಪ, ಕಂದಾಯ ವಸೂಲಿಗಾರ ಕೆ.ಸಿ. ರವಿ ಹಾಗೂ ಸಿಬ್ಬಂದಿ ವರ್ಗ ಇದ್ದರು.
*ಗೋಣಿಕೊಪ್ಪಲು: ಬ್ರಿಟಿಷ್ ನವರ ಚಿತಾವಣೆಯಿಂದ ದೇಶದಲ್ಲಿ ಎರಡು ಧರ್ಮಗಳ ನಡುವೆ ಕಚ್ಚಾಟ ಆರಂಭವಾಗಿ ಅದು ಗಾಂಧೀಜಿವರ ಹ್ಯತೆಗೂ ಕಾರಣವಾದದ್ದು ವಿಷಾದಕರ. ರಾಷ್ಟ್ರಪಿತನ ಬದುಕು ದಾರುಣವಾಗಿ ಅಂತ್ಯಗೊಂಡದ್ದು ನೋವಿನ ಸಂಗತಿ ಎಂದು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಹೇಳಿದರು.
ಸ್ಥಳೀಯ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘ ಉದ್ಘಾಟನೆ ಹಾಗೂ ಗಾಂಧಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರೆಬಟ್ಟೆ ತೊಟ್ಟು ಗಾಂಧಿ ಭಾರತೀಯರನ್ನು ಒಂದು ಗೂಡಿಸಲು ದೇಶದುದ್ದಗಲಕ್ಕೂ ಓಡಾಡಿದರು. ಅವರ ಸರಳತೆ ಮತ್ತು ಸತ್ಯ, ಅಹಿಂಸೆಯ ತತ್ವಗಳನ್ನು ಯುವ ಜನಾಂಗ ಮೈಗೂಡಿಸಿಕೊಳ್ಳುವದು ಅಗತ್ಯವಿದೆ. ಅಹಿಂಸೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಗಾಂಧೀಜಿಯವರ ನಾಡಿನಲ್ಲಿ ಇಂದು ಸಣ್ಣಪುಟ್ಟ ಕಾರಣಗಳಿಗೆಲ್ಲ ಹಿಂಸೆ ಮಾರ್ಗ ಅನುಸರಿಸುತ್ತಿರುವದು ಅತ್ಯಂತ ವಿಷಾದಕರ. ವಿದ್ಯಾರ್ಥಿಗಳು ಒಳ್ಳೆಯ ಗುಣ ನಡೆತೆಗಳನ್ನು ರೂಢಿಸಿಕೊಂಡು ಉತ್ತಮವಾಗಿ ಓದುವ ಮೂಲಕ ಗಾಂಧಿ ಮಾರ್ಗವನ್ನು ಸ್ವಲ್ಪಮಟ್ಟಿಗಾದರೂ ಅನುಸರಿವದು ಒಳ್ಳೆಯದು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ, ವಿದ್ಯಾರ್ಥಿಗಳು ಸದ್ಗುಣಗಳನ್ನು ಮೈಗೂಡಿಸಿಕೊಂಡು ಓದಿನ ಕಡೆಗೆ ಗಮನಹರಿಸಬೇಕು. ಕೆಟ್ಟ ಆಲೋಚನೆಗಳನ್ನು ದೂರಮಾಡಬೇಕು. ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲರಾದ ಕೆ.ಪಿ. ಪೊನ್ನಮ್ಮ ಮಾತನಾಡಿ, ಗಾಂಧೀಜಿಯವರಿಗೆ ಮಹಿಳೆಯರ ಬಗ್ಗೆ ಅಪಾರವಾದ ಗೌರವವಿತ್ತು. ಗಾಂಧಿ ತಾಯಿ ಹೃದಯ ಹೊಂದಿದ್ದರು ಎಂದರು.
ಆಡಳಿತ ಮಂಡಳಿ ನಿರ್ದೇಶಕ ಪೋಡಮಾಡ ನಾಚಯ್ಯ, ಉಪನ್ಯಾಸಕರಾದ ಕೆ.ಜಿ. ಅಶ್ವಿನಿ ಕುಮಾರ್, ಡಾ. ಜೆ. ಸೋಮಣ್ಣ ಮಾತನಾಡಿದರು. ಸಹಕೋಶಾಧಿಕಾರಿ ಆಲೆಮಾಡ ಕರುಂಬಯ್ಯ, ಸಾಂಸ್ಕøತಿಕ ಸಂಘದ ಸಂಚಾಲಕಿ ಪ್ರತಿಭಾ ಉತ್ತಪ್ಪ, ಎನ್.ಕೆ. ಪ್ರಭು, ಎಂ.ಪಿ. ರಾಘವೇಂದ್ರ, ಡಿ.ಎನ್. ಸುಬ್ಬಯ್ಯ, ತಿಮ್ಮರಾಜು, ಪಿ.ಎ. ಪ್ರಭುಕುಮಾರ್, ಸುಚರಿತಾ ಹಾಜರಿದ್ದರು.ಹುದಿಕೇರಿ: ಹುದಿಕೇರಿ ಗ್ರಾಮ ಪಂಚಾಯಿತಿ ವತಿಯಿಂದ ಮಹತ್ಮಾ ಗಾಂಧಿಯವರ ಹುಟ್ಟುಹಬ್ಬದ ಅಂಗವಾಗಿ ಹುದಿಕೇರಿ ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಜನತಾ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಸರ್ವಶಿಕ್ಷಕರೊಡಗೂಡಿ ಜಾಥಾವನ್ನು ನಡೆಸಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ಅಂಗಡಿ ಮುಂಗಟ್ಟುಗಳು, ನಿವಾಸಿಗಳಿಗೆ ಕರಪತ್ರವನ್ನು ಹಂಚುವ ಮೂಲಕ ಮನವರಿಕೆ ಮಾಡಲಾಯಿತು. ಪ್ಲಾಸ್ಟಿಕ್ ನಿಷೇಧಿಸುವ ಕುರಿತು ಅಂಗಡಿಗಳು ಹೊಟೇಲ್‍ಗಳಿಗೆ ನೋಟೀಸನ್ನು ನೀಡಲಾಯಿತು. ಸ್ವಚ್ಛ ಭಾರತ್ ಮಿಷನ್ ಮತ್ತು ಕ್ಲೀನ್ ಕೂರ್ಗ್ ಇನಿಶಿಯೇಟಿವ್ ಸಹಯೋಗದಲ್ಲಿ ಸಂಪೂರ್ಣ ವೈಜ್ಞಾನಿಕ ಕಸವಿಲೇವಾರಿ ಬಗ್ಗೆ ತೀರ್ಮಾನಿಸಲಾಗಿದ್ದು ವೈಜ್ಞಾನಿಕ ಕಸ ಸಂಗ್ರಹಣಾ ಘಟಕವನ್ನು ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ ಉದ್ಘಾಟಿಸಿದರು. ಹಾಜರಿದ್ದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಘನ ತ್ಯಾಜ್ಯಗಳನ್ನು ವಿಂಗಡಿಸುವ ಕುರಿತು ಪಿ.ಡಿ.ಓ. ಸುರೇಶ್ ಮಾಹಿತಿಯನ್ನು ನೀಡಿದರು. ಮನೆಯಲ್ಲಿ ವಿವಿಧ ಕಸಗಳನ್ನು ವಿಂಗಡಿಸಿ ಘಟಕಕ್ಕೆ ತಂದುಕೊಡುವಂತೆ ತಿಳಿಸಿದರು. ಈ ಸಂದರ್ಭ ಪಂಚಾಯಿತಿ ಮಾಜಿ ಸದಸ್ಯ ಸಾದಲಿ, ಜನತಾ ಪ್ರೌಢಶಾಲಾ ಶಿಕ್ಷಕ ವರ್ಗದವರು, ಪಂಚಾಯಿತಿ ಸಿಬ್ಬಂದಿಗಳಾದ ದೇವಯ್ಯ, ಕೀರ್ತನ್, ಮನು, ಚೇತನ್ ಹಾಜರಿದ್ದು ಸ್ವಚ್ಛತಾ ದಿನವನ್ನು ಆಚರಿಸಲಾಯಿತು.
ಸೋಮವಾರಪೇಟೆ: ಗಾಂಧಿ ಜಯಂತಿ ಅಂಗವಾಗಿ ತಾಲೂಕಿನ ವಿವಿಧ ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ಸಂಘ-ಸಂಸ್ಥೆಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಶಾಂತಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಚಾಲನೆ ನೀಡಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪಲ್ಲವಿ, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಅಬ್ಬೂರುಕಟ್ಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ನವಜೀವನ ಸಮಿತಿ ವತಿಯಿಂದ ಅಬ್ಬೂರುಕಟ್ಟೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ವಲಯ ಮೇಲ್ವಿಚಾರಕ ರಮೇಶ್, ಸೇವಾಪ್ರತಿನಿಧಿ ಶೈಲಾ, ನವಜೀವನ ಸಮಿತಿ ಸದಸ್ಯರಾದ ಸುಧಾಕರ್, ರವಿ, ರಮೇಶ್, ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೂಡಿಗೆ: ಮುಳ್ಳುಸೋಗೆ ಗ್ರಾಮ ಪಂಚಾಯಿತಿ, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಸೇವಾ ಶ್ರಮದಾನ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಉದ್ಘಾಟಿಸಿದರು. ನಂತರ ಮುಳ್ಳುಸೋಗೆ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣ ಹಾಗೂ ಸುತ್ತಮುತ್ತಲು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭ ಉಪಾಧ್ಯಕ್ಷ ತಾರಾನಾಥ್, ಸದಸ್ಯರಾದ ಸಂತೋಷ್, ಸುಚಿತ್ರ, ರಾಧ, ಜ್ಯೋತಿ, ವೇದಾವತಿ, ರುದ್ರಾಂಬೆ, ಸುಭೇದಾ, ಜಯಲಕ್ಷ್ಮಿ, ಕಮಲ, ರುಕ್ಯಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಕಂದಾಯ ವಸೂಲಿಗಾರ ಕುಮಾರಸ್ವಾಮಿ, ಶಾಲಾ ಮುಖ್ಯ ಶಿಕ್ಷಕಿ ಯಮುನಾ, ಸಹ ಶಿಕ್ಷಕರು ಹಾಗೂ ಸಾರ್ವಜನಿಕರು ಇದ್ದರು.ಗೋಣಿಕೊಪ್ಪಲು: ಗಾಂಧಿ ಜಯಂತಿ ಪ್ರಯುಕ್ತ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕ ಮತ್ತು ಕೊಡಗು ದಂತ ಮಹಾ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಧ್ವಜಾರೋಹಣವನ್ನು ಡಾ. ಸುರೇಶ್, ಡಾ. ಗಣೇಶ್ ಕುಮಾರ್, ಡಾ. ಆನಂದ್ ನೆರವೇರಿಸುವದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಎನ್.ಸಿ.ಸಿ. ಘಟಕದ ವಿದ್ಯಾರ್ಥಿಗಳು ಮತ್ತು ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳ ನೆರವಿನೊಂದಿಗೆ ಹಣ್ಣು-ಹಂಪಲು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೊಡಗು ದಂತ ಮಹಾ ವಿದ್ಯಾಲಯದ ಉಪ ಪ್ರಾಂಶುಪಾಲ ಡಾ. ಜಿತೇಶ್, ಇಂದು ದೇಶದಲ್ಲಿ ಗಾಂಧಿ ಜಯಂತಿ ಅಂಗವಾಗಿ ಬಹಳಷ್ಟು ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಸ್ವಾತಂತ್ರ್ಯ ನಂತರ ನಮ್ಮ ಜನರಿಗೆ ಸ್ವಚ್ಛ ಮತ್ತು ಹಸಿರು ಜೀವನ ಯೋಗ್ಯ ವಾತಾವರಣ ದೊರಕಿಸಿಕೊಡಲು ಶ್ರಮಪಡುತ್ತಿದ್ದೇವೆ. ಪ್ರಾರಂಭಿಕ ಹಂತದಲ್ಲಿ ಗ್ರಾಮದಿಂದ ಹಿಡಿದು ನಗರಗಳವರೆಗೆ ಬಹಳಷ್ಟು ಪರಿಣಾಮಕಾರಿ ಯೋಜನೆಗಳನ್ನು ಹಮ್ಮಿಕೊಂಡು ಅದರಲ್ಲಿ ಯಶಸ್ವಿಯಾಗುತ್ತ ಬಂದಿದ್ದೇವೆ. ಇಂದು ನಮ್ಮ ಅದೆಷ್ಟೋ ಗ್ರಾಮಗಳು ಸ್ವಚ್ಛತೆಯೆಡೆಗೆ ಸಾಗುತ್ತಿವೆ. ಇದರಲ್ಲಿ ಪ್ರತಿಯೊಬ್ಬ ಪ್ರಜೆಯ ಜವಬ್ದಾರಿಯು ಪ್ರಾಮುಖ್ಯವಾಗಿದೆ ಎಂದರು.
ಡಾ. ಹೆಚ್.ವಿ. ಸುರೇಶ್ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಗಾಂಧಿಯವರ 150ನೇ ಜಯಂತಿಯನ್ನು ಕೊಡುಗೆಯಾಗಿಸಬೇಕು ಎಂಬದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹಾತ್ವಕಾಂಕ್ಷೆ. ಈ ನಿಟ್ಟಿನಲ್ಲಿ ಅವರು 2014ರಲ್ಲಿ ಘೋಷಿಸಿದ ಯೋಜನೆ ‘ಸ್ವಚ್ಛ ಭಾರತ’. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಂದ ಹಿಡಿದು ಸ್ನಾತಕೊತ್ತರ ವಿದ್ಯಾರ್ಥಿಗಳವರೆಗೆ, ಹಳ್ಳಿಯಿಂದ ನಗರಗಳವರೆಗೆ ಈ ಕಾರ್ಯಕ್ರಮದ ಕುರಿತು ಅರಿವು ಮೂಡಿಸಬೇಕಾಗಿದೆ ಎಂದರು. ಅಭಿಯಾನದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವೈದ್ಯಾಧಿಕಾರಿ ಡಾ. ಗಣೇಶ್ ಕುಮಾರ್, ಡಾ. ಹೆಚ್.ವಿ. ಸುರೇಶ್, ಡಾ. ಬೋಜಮ್ಮ, ಉಪನ್ಯಾಸಕ ಅಕ್ರಮ್, ಡಾ. ಅಭಿಮೇದಿ, ದೀಕ್ಷಾ, ಎನ್.ಸಿ.ಸಿ. ಘಟಕದ ವಿದ್ಯಾರ್ಥಿ ನಾಯಕರಾದ ಅಭಿಷೇಕ್, ದೀಪಕ್, ಸಾಜಿದ್, ಹರ್ಷಿತ್, ನಿಕೇಶ್, ಆರ್ಯ, ಪಲ್ಲವಿ, ಆನ್ಸಿ, ದಂತ ಮಹಾ ವಿದ್ಯಾಲಯದ ಲೋಕೇಶ್, ಸಂತೋಷ್ ಇನ್ನಿತರÀರು ಭಾಗಿಯಾಗಿದ್ದರು.
ಕೂಡಿಗೆ: ಕುಶಾಲನಗರ ಮಾಜಿ ಸೈನಿಕರ ಸಂಘದ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛ ಭಾರತ್ ಅಡಿಯಲ್ಲಿ ಮುಳ್ಳುಸೋಗೆ ಮತ್ತು ಗುಮ್ಮನಕೊಲ್ಲಿ ವ್ಯಾಪ್ತಿಗಳಲ್ಲಿ ಶ್ರಮದಾನ ಮಾಡುವ ಮೂಲಕ ಹೆದ್ದಾರಿ ಬದಿಗಳಲ್ಲಿ ಸ್ವಚ್ಛತೆ ಮಾಡಲಾಯಿತು. ಮಾಜಿ ಸೈನಿಕರ ಸಂಘ ಅಧ್ಯಕ್ಷ ಮೊಣ್ಣಪ್ಪ, ಕಾರ್ಯದರ್ಶಿ ಮುದ್ದಪ್ಪ ಸೇರಿದಂತೆ 55 ಕ್ಕೂ ಹೆಚ್ಚು ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರ: ಗಾಂಧಿ ಜಯಂತಿ ಪ್ರಯುಕ್ತ ಕುಶಾಲನಗರದ ಪಾರಸ್ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕುಶಾಲನಗರದ ಮುಖ್ಯ ರಸ್ತೆಯಲ್ಲಿ ಜ್ಯುವೆಲ್ಸ್‍ನ ಶಾಖಾ ವ್ಯವಸ್ಥಾಪಕ ಆದರ್ಶ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಪಟ್ಟಣ ಪಂಚಾಯಿತಿ ಹೆಲ್ತ್ ಇನ್ಸ್‍ಪೆಕ್ಟರ್ ಸತೀಶ್ ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ಜನ ಜಾಗೃತಿ ಮೂಡಿಸಿದರು.
ಮಡಿಕೇರಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನವನ್ನು ಕಾಲೇಜಿನಲ್ಲಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಪ್ರೊ. ಚಿತ್ರಾ ವೈ ಅವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಬಗ್ಗೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ದಯಾನಂದ ಕೆ.ಸಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟಿರುವ ಮಹಾನ್ ನಾಯಕರನ್ನು ಸ್ಮರಿಸಿಕೊಂಡು,ಅವರ ಜೀವನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಬಗ್ಗೆ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ ಶಶಿಧರ್ ಬಿ.ಆರ್. ಮಾತನಾಡಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ನಾಯಕಿ ಹರ್ಷಿತಾ ವಿ.ಬಿ. ಪ್ರಾರ್ಥನೆಯನ್ನು ನೆರವೆರಿಸಿದರು. ಕಾಲೇಜಿನ ಪ್ರಾಧ್ಯಾಪಕ ವರ್ಗದವರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.ಪಾಲಿಬೆಟ್ಟ: ಪಾಲಿಬೆಟ್ಟ ಚೆಶೈರ್ ಹೋಂನಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಪಾಲಿಬೆಟ್ಟ ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳಿಗೆ ಗಾಂಧೀಜಿಯ ತತ್ವಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಪಾಲಿಬೆಟ್ಟ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಟವಿ ಕಾರ್ಯದರ್ಶಿ ಕನ್ನಿಕಾ ಅಯ್ಯಪ್ಪ ಚೆಶೈರ್ ಹೋಮ್ಸ್‍ನ ಅಧ್ಯಕ್ಷೆ ಗೀತ ಚಂಗಪ್ಪ, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಮುಖ್ಯೋಪಾಧ್ಯಾಯ ಶಿವರಾಜ್, ಅಧ್ಯಾಪಕ ವೃಂದದವರು ಹಾಗೂ ವಿಶೇಷ ಚೇತನ ಮಕ್ಕಳು ಭಾಗವಹಿಸಿದ್ದರು.
ಸುಂಟಿಕೊಪ್ಪ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧಿಜಿ ಹಾಗೂ ಲಾಲ್ ಬಹೂದ್ದೂರ್ ಶಾಸ್ತ್ರೀಜಿ ಜನ್ಮ ದಿನಾಚರಣೆಯನ್ನು ಕಾಲೇಜಿನ ಆವರಣದಲ್ಲಿ ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ವಹಿಸಿ ಮಾತನಾಡಿ. ವಿದ್ಯಾರ್ಥಿಗಳು ಕೇವಲ ಪುಣ್ಯ ಪುರುಷರ ಜಯಂತಿಯನ್ನು ಆಚರಿಸಿದರೆ ಸಾಲದು ಬರೀ ಆಚರಣೆಯಲ್ಲಿ ಗಾಂಧೀಜಿಯ ಮೌಲ್ಯಗಳಿಗೆ ಪುಷ್ಠಿ ಬರುವದಿಲ್ಲ . ಮಹಾತ್ಮÀ ಗಾಂಧೀಜಿಯವರ ಆದರ್&divlusmn; ಲಾಲ್ ಬಹೂದ್ದೂರ್ ಶಾಸ್ತ್ರೀಜಿ ದಿಟ್ಟತನವನ್ನು ವಿದ್ಯಾರ್ಧಿಗಳು ಮೈಗೂಡಿಸಿ ಕೊಂಡು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಂತಾಗಬೇಕು ಎಂದರು.
ಮಹಾತ್ಮ ಗಾಂಧಿಜಿ ಹಾಗೂ ಲಾಲ್ ಬಹೂದ್ದೂರ್ ಶಾಸ್ತ್ರೀಜಿ ಜನ್ಮದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಧರ್ಮ ಪ್ರಾರ್ಥನೆಯನ್ನು ನಡೆಸಿ ಧರ್ಮಗ್ರಂಥಗಳನ್ನು ಪಠಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಬೆಳ್ಯಪ್ಪ ಪ್ರಾಸ್ತಾವಿಕ ನುಡಿಯಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಈಶ, ಪಿ. ಸೋಮಚಂದ್ರ, ಕೆ.ಸಿ. ಕವಿತ, ಜಯಶ್ರೀ, ಕಾವ್ಯ, ಪದ್ಮಾವತಿ, ಸುಕಣ್ಯ, ಮಂಜುಳ, ಕನಕ, ವಿದ್ಯಾರ್ಥಿಗಳು ಪಾಲ್ಗೊಂಡರು.
ಮೂರ್ನಾಡು: ಗಾಂಧಿ ಜಯಂತಿ ಮತ್ತು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಮುತ್ತಾರ್ಮುಡಿ ಗ್ರಾಮದ ಭಗವತಿ ಮಹಿಳಾ ಮಂಡಳದ ಸದಸ್ಯರು ಸ್ವಚ್ಛತೆ ಕಾರ್ಯ ನಡೆಸಿದರು.
ಮುತ್ತಾರ್ಮುಡಿಯ ಭಗವತಿ ಮಹಿಳಾ ಮಂಡಳದ ಸದಸ್ಯರು ಮುತ್ತಾರ್ಮುಡಿ ಗ್ರಾಮದ ವ್ಯಾಪ್ತಿಗೆ ಸೇರುವ ಮೂರ್ನಾಡು ಮಡಿಕೇರಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಶ್ರಮದಾನ ಮಾಡಿದರು. ಸಂಘದ 30 ಕ್ಕೂ ಅಧಿಕ ಮಹಿಳೆಯರು ಎರಡು ತಂಡಗಳಾಗಿ ವಿಂಗಡನೆಗೊಂಡು ಮೂರ್ನಾಡು ಪೆಟ್ರೋಲ್ ಬಂಕ್ ಬಳಿಯಿಂದ ಸ್ವಚ್ಛತಾ ಕಾರ್ಯ ಪ್ರಾರಂಭ ಮಾಡಿ ಮುತ್ತಾರ್ಮುಡಿ ಸೇತುವೆಯವರೆಗೆ ರಸ್ತೆ ಬದಿಯಲ್ಲಿದ್ದ ಪ್ಲಾಸ್ಟಿಕ್, ತ್ಯಾಜ್ಯ ವಸ್ತುಗಳು, ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿ ಚೀಲಗಳಲ್ಲಿ ತುಂಬಿಸಿದರು. ತಿಂಗಳಲ್ಲಿ ಒಂದು ದಿನ ಶ್ರಮದಾನದ ಮೂಲಕ ಮುತ್ತಾರ್ಮುಡಿ ಗ್ರಾಮದ ವ್ಯಾಪ್ತಿಯಲ್ಲಿನ ಎಲ್ಲಾ ರಸ್ತೆ ಬದಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವದು ಎಂದು ಭಗವತಿ ಮಹಿಳಾ ಮಂಡಳ ಸದಸ್ಯರು ತಿಳಿಸಿದ್ದಾರೆ.
ಸಂಪಾಜೆ: ಗಾಂಧೀಜಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಕೆ.ಜಿ. ರಾಜರಾಮ ಅವರ ಅಧ್ಯಕ್ಷತೆಯಲ್ಲಿ ಸಂಪಾಜೆ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಚೆಂಬು ಗ್ರಾಮ ಪಂಚಾಯಿತಿ ಅಧಕ್ಷ ಮಾಧವ ಪೆÇಯ್ಯೆಮಜಲು, ಸಂಸ್ಥೆಯ ಸಂಚಾಲಕ ಎಂ. ಶಂಕರನಾರಾಯಣ ಭಟ್, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಮಾಲತಿ ವೈ.ಕೆ. ಸ್ವಾಗತಿಸಿದರು. ಮುಖ್ಯ ಶಿಕ್ಷಕ ಎ. ಐತ್ತಪ್ಪ ವಂದಿಸಿದರು. ರೂಪಾ ಮತ್ತು ಶ್ರೀವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಹೆಬ್ಬಾಲೆ: ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭ ಕಾರ್ಯದರ್ಶಿ ರಜಿನಿ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
ವೀರಾಜಪೇಟೆ: ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ವೀರಾಜಪೇಟೆ ಕಾವೇರಿ ಶಾಲೆಯ ಶಾಲಾ ವಿದ್ಯಾರ್ಥಿಗಳಿಂದ ಶ್ರಮದಾನ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ಶಾಲಾ ಆವರಣ ಹಾಗೂ ರಸ್ತೆಯ ಬದಿಗಳನ್ನು ಸ್ವಚ್ಛಗೊಳಿಸಿದರ�?
 
						