ಸೋಮವಾರಪೇಟೆ, ಅ. 4: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ತಾ. 18ರ ತುಲಾ ಸಂಕ್ರಮಣದ ಪ್ರಯುಕ್ತ ಪಟ್ಟಣದ ಕಾವೇರಿ ಪ್ರತಿಮೆ ಬಳಿ ವಿಶೇಷ ಪೂಜೆ, ಹೋಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಚ್.ಎ. ನಾಗರಾಜ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ತುಲಾ ಸಂಕ್ರಮಣದ ಪ್ರÀಯುಕ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಕಾವೇರಿ ತೀರ್ಥೋದ್ಭವದಂದು ತಲಕಾವೇರಿಗೆ ತೆರಳಿ ತೀರ್ಥವನ್ನು ತರಲಾಗುವದು. ಮಾರನೆ ದಿನ ಬೆಳಿಗ್ಗೆ ಇಲ್ಲಿನ ಕಾವೇರಿ ಪ್ರತಿಮೆ ಬಳಿ ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕರಿಗೆ ವಿತರಿಸಲಾಗುವದು ಎಂದರು.
ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಬಿ. ರಾಜಪ್ಪ, ಪದಾಧಿಕಾರಿಗಳಾದ ಪುನಿತ್, ಸಿ. ರವಿ, ಶಿವ, ಮನೋಜ್, ಶಿವರಾಜ್ ಉಪಸ್ಥಿತರಿದ್ದರು.
 
						