ಚೆಟ್ಟಳ್ಳಿ, ಅ. 3: ಬಾಳೆಲೆಯ ನಿವಾಸಿಗಳಾದ ಮಾಪಂಗಡ ಸಜನ್ ದೇವಯ್ಯ ಮತ್ತು ಮಿತ್ರರು ಸೇರಿ ಒಂದು ಲಕ್ಷದಷ್ಟ್ಟು ಹಣವನ್ನು ಒಟ್ಟುಗೂಡಿಸಿ ಮಹಾ ಮಳೆಗೆ ಮನೆ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ವಿತರಿಸಿದರು.
ಗಾಳಿಬೀಡು-ವನಚಲು ಗ್ರಾಮದ ಅಯ್ಯರಣಿಯಂಡ ಇಂದಿರಾ ಅವರು ಗ್ರಾಮದಲ್ಲಿ ಏನು ಇಲ್ಲದೆ ಒಬ್ಬಂಟಿಯಾಗಿ ಮಡಿಕೇರಿಯಲ್ಲಿ ತಮ್ಮ ಮಕ್ಕಳನ್ನು ಓದಿಸಿಕೊಂಡು ಸಣ್ಣ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದರು. ಅವರಿಗೆ ಹತ್ತು ಸಾವಿರ ಬೆಲೆಬಾಳುವ ಹೊಲಿಗೆ ಯಂತ್ರವನ್ನು ನೀಡಲಾಯಿತು.
ಮನೆ, ಆಸ್ತಿಗಳನ್ನು ಕಳೆದುಕೊಂಡ ಚೆನ್ನಪಂಡ ಚೋಂದಮ್ಮ ದೇವಸ್ತೂರು ಇವರು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿರುವ ಮಂಗಳಾದೇವಿನಗರದ ಈಗಾಗಲೇ ಎಲ್ಲವನ್ನು ಕಳೆದುಕೊಂಡು ಮೈತ್ರಿ ಗಂಜಿ ಕೇಂದ್ರದಲ್ಲಿರುವ ವಿಧವೆ, ಈಡಾ ಜಾನ್ಸನ್, ಮಕ್ಕಂದೂರಿನ ಕೋಟ್ರಂಗಡ ಉತ್ತಪ್ಪ, ಐ. ನಾಣಯ್ಯ, ಓಡಿಯಂಡ ತಿಮ್ಮಯ ,ಚಾಮೇರಾ ನಾಣಯ್ಯ, ಚೆನ್ನಪಂಡ ದೇವಯ್ಯ , ಬೊಟ್ಟೋಳಂಡ ದೇವಕಿ ಮುಂತಾದವರಿಗೆ ನೆರವು ವಿತರಿಸಲಾಯಿತು. ನಂತರ ನಿರಾಶ್ರಿತರಿಗೆ ತಮ್ಮಿಂದಾದ ಸಹಾಯವನ್ನು ಮಾಡಬೇಕೆಂದು ತೀರ್ಮಾನಿಸಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅವರ ಪತ್ನಿ ಜಮುನಾ ದೇವಯ್ಯ, ಪೆಮ್ಮಂಡ ಯಮುನಾ ಮುಂತಾದವರು ಭಾಗಿಯಾಗಿದ್ದರು.