ಮಡಿಕೇರಿ, ಅ. 3: 2017-18ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಾಡುವ “ನಾರೀಶಕ್ತಿ ಪುರಸ್ಕಾರ”ಕ್ಕೆ ಜಿಲ್ಲೆಯಿಂದ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆಗೈದಿರುವ (ನಗರಾಭಿವೃದ್ಧಿ ಸಂಸ್ಥೆ, ಮುನಿಸಿಪಲ್ ಸಂಸ್ಥೆ, ಅಥವಾ ಕಾರ್ಪೋರೇಷನ್‍ಗಳು ಮಹಿಳೆಯರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರಬೇಕು) ಅರ್ಹ ವ್ಯಕ್ತಿಗಳಿಂದ ಹಾಗೂ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಶಸ್ತಿಗಾಗಿ ನಿಗದಿಪಡಿಸಿರುವ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ತಾ. 10 ರೊಳಗೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್ ಗೇಟ್ ಹತ್ತಿರ, ಮೈಸೂರು ರಸ್ತೆ, ಕೊಡಗು ಜಿಲ್ಲೆ ಇವರಿಗೆ ಸಲ್ಲಿಸತಕ್ಕದ್ದು, ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವದೇ ಕಾರಣಕ್ಕೂ ಪರಿಗಣಿಸಲಾಗುವದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ದೂರವಾಣಿ ಸಂಖ್ಯೆ: 08272-298379ರನ್ನು ಸಂಪರ್ಕಿಸಬಹುದು.