ಮಡಿಕೇರಿ, ಅ. 3: ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಉಪ ನಿರೀಕ್ಷಕರಾಗಿ ಹಾಗೂ ಕೆಲವು ತಿಂಗಳ ಹಿಂದೆ ಗೋಣಿಕೊಪ್ಪಲುವಿನಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಹರೀಶ್ಚಂದ್ರ ಕೆ.ಪಿ. ಅವರು ತಾ. 3ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸೇವಾವಧಿಯಲ್ಲಿ ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದ ಅವರು ಪ್ರಸ್ತುತ ಉಡುಪಿಯಲ್ಲಿ ಕರ್ತವ್ಯದಲ್ಲಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.