ಮಡಿಕೇರಿ, ಸೆ. 30: ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆಯನ್ನು ಅ. 4 ರಂದು ಪೂರ್ವಾಹ್ನ 10 ಗಂಟೆಗೆ ನೋಡೆಲ್ ಅಧಿಕಾರಿ ಶ್ರೀಕಂಠಯ್ಯ ಉಪಸ್ಥಿತಿಯಲ್ಲಿ ಹಾಗೂ 11 ಗಂಟೆಗೆ ಜಮಾಬಂದಿ ಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂದ್ರೀರ ಆರ್. ಶಾರದ ಅಧ್ಯಕ್ಷತೆಯಲ್ಲಿ ಗ್ರಾಮದ ಕುವೆಂಪು ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಿರುವದಾಗಿ ಪ್ರಕಟಣೆ ತಿಳಿಸಿದೆ.