ಮಡಿಕೇರಿ, ಅ. 1: ಸ್ವಚ್ಛತಾ ದಿನದ ಅಂಗವಾಗಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ತಾ. 2 ರಂದು (ಇಂದು) ಬೆಳಿಗ್ಗೆ 8.30 ಗಂಟೆಗೆ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿರುವ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡ ಪ್ರತಿಮೆ ಆವರಣದಲ್ಲಿ ಶ್ರಮದಾನ ಹಮ್ಮಿಕೊಳ್ಳಲಾಗಿದೆ.
ಇಂದು ಸಭೆ: ಯುವ ವೇದಿಕೆ ಆಡಳಿತ ಮಂಡಳಿ ಸಭೆ ತಾ. 2 ರಂದು (ಇಂದು) ಬೆಳಿಗ್ಗೆ 9.30 ಗಂಟೆಗೆ ಗೌಡ ಸಮಾಜದಲ್ಲಿ ನಡೆಯಲಿದೆ. ಪ್ರಕೃತಿ ವಿಕೋಪ ಹಾನಿ, ಕೈಲ್ ಮುಹೂರ್ತ ಆಚರಣೆ ಹಾಗೂ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವದೆಂದು ಯುವ ವೇದಿಕೆ ಕಾರ್ಯದರ್ಶಿ ಕಟ್ಟೆಮನೆ ರೋಶನ್ ತಿಳಿಸಿದ್ದಾರೆ.