ಸಿದ್ದಾಪುರ, ಅ. 1: ಈ ಬಾರಿಯ ಮುಂಗಾರು ಮಳೆಗೆ ಕಾವೇರಿ ನದಿಯಲ್ಲಿ ಪ್ರವಾಹದ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ನದಿ ಬದಿಯಲ್ಲಿ ಪ್ಲಾಸ್ಟಿಕ್ ಚೀಲಗಳು ಎದ್ದು ಕಾಣುತ್ತಿವೆ. ಈ ಬಾರಿ ನಿರೀಕ್ಷೆಗೂ ಮೀರಿ ಮಳೆ ಸುರಿದ ಹಿನ್ನೆಲೆಯಲ್ಲಿ ಕಾವೇರಿ ನದಿಯು ಮೈದುಂಬಿ ಹರಿಯಿತು. ಮಹಾ ಮಳೆಗೆ ನದಿಯಲ್ಲಿ ಪ್ರವಾಹದ ನೀರಿನಲ್ಲಿ ಅನೇಕ ಗಿಡ-ಮರಗಳು ತೇಲಿ ಬಂದವು. ಇದರೊಂದಿಗೆ ಪ್ಲಾಸ್ಟಿಕ್ ಚೀಲಗಳು, ಕೈ ಚೀಲಗಳು ನದಿಯ ಬದಿಯಲ್ಲಿ ಸಿಲುಕಿಕೊಂಡಿವೆ. ಕಾವೇರಿ ನದಿ ಹರಿಯುತ್ತಿರುವ ಸಿದ್ದಾಪುರ, ಗುಹ್ಯ, ಕರಡಿಗೋಡು ಭಾಗದ ನದಿ ದಡದಲ್ಲಿ ಈ ದೃಶ್ಯ ಕಂಡು ಬಂದಿದೆ. ಕಾವೇರಿ ನದಿ ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ಸಂಘಟನೆಯೊಂದು ಕಾವೇರಿ ನದಿಯನ್ನು ಸ್ವಚ್ಛತೆಗೊಳಿಸಿತು. ಆದರೆ ಇದೀಗ ಪ್ರವಾಹದ ನೀರಿನಲ್ಲಿ ಅನೇಕ ಸಿದ್ದಾಪುರ, ಅ. 1: ಈ ಬಾರಿಯ ಮುಂಗಾರು ಮಳೆಗೆ ಕಾವೇರಿ ನದಿಯಲ್ಲಿ ಪ್ರವಾಹದ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ನದಿ ಬದಿಯಲ್ಲಿ ಪ್ಲಾಸ್ಟಿಕ್ ಚೀಲಗಳು ಎದ್ದು ಕಾಣುತ್ತಿವೆ. ಈ ಬಾರಿ ನಿರೀಕ್ಷೆಗೂ ಮೀರಿ ಮಳೆ ಸುರಿದ ಹಿನ್ನೆಲೆಯಲ್ಲಿ ಕಾವೇರಿ ನದಿಯು ಮೈದುಂಬಿ ಹರಿಯಿತು. ಮಹಾ ಮಳೆಗೆ ನದಿಯಲ್ಲಿ ಪ್ರವಾಹದ ನೀರಿನಲ್ಲಿ ಅನೇಕ ಗಿಡ-ಮರಗಳು ತೇಲಿ ಬಂದವು. ಇದರೊಂದಿಗೆ ಪ್ಲಾಸ್ಟಿಕ್ ಚೀಲಗಳು, ಕೈ ಚೀಲಗಳು ನದಿಯ ಬದಿಯಲ್ಲಿ ಸಿಲುಕಿಕೊಂಡಿವೆ. ಕಾವೇರಿ ನದಿ ಹರಿಯುತ್ತಿರುವ ಸಿದ್ದಾಪುರ, ಗುಹ್ಯ, ಕರಡಿಗೋಡು ಭಾಗದ ನದಿ ದಡದಲ್ಲಿ ಈ ದೃಶ್ಯ ಕಂಡು ಬಂದಿದೆ. ಕಾವೇರಿ ನದಿ ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ಸಂಘಟನೆಯೊಂದು ಕಾವೇರಿ ನದಿಯನ್ನು ಸ್ವಚ್ಛತೆಗೊಳಿಸಿತು. ಆದರೆ ಇದೀಗ ಪ್ರವಾಹದ ನೀರಿನಲ್ಲಿ ಅನೇಕ ಸಂದರ್ಭದಲ್ಲಿ ಕರಡಿಗೋಡು, ಗುಹ್ಯ ಗ್ರಾಮದ ನದಿದಡದ ನೂರಾರು ಮನೆಗಳು ಜಲಾವೃತಗೊಂಡು ಬಿರುಕು ಬಿಟ್ಟಿವೆ.

ಕಾಯುತ್ತಿರುವ ನಿವಾಸಿಗಳು : ಕರಡಿಗೋಡು ಗ್ರಾಮದ ನದಿದಡದ ನಿವಾಸಿಗಳು ಈ ಬಾರಿಯ ಮಹಾ ಮಳೆಗೆ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಹಿಂದೆಂದೂ ಕಾಣದಷ್ಟು ಪ್ರವಾಹ ಏರಿಕೆಯಾಗಿ ನದಿದಡದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ತಮ್ಮ ಪ್ರಾಣಗಳನ್ನು ಕೈಯಲ್ಲಿ ಹಿಡಿದುಕೊಂಡು ರಾತೋರಾತ್ರಿ ಮನೆ ಬಿಟ್ಟು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡರು. ಹಲವಾರು ಮಂದಿಯ ಮನೆಯ ಸಾಮಗ್ರಿಗಳು ನದಿ ಪಾಲಾದವು. ಪ್ರಾವಾಹದ ನೀರು ಇಳಿಮುಖಗೊಂಡ ನಂತರ ಮನೆಗಳಿಗೆ ತೆರಳಿದ ಕುಟುಂಬಗಳು ಮನೆ ನೋಡುತ್ತಿದ್ದಂತೆ ದು:ಖಿಸುತ್ತಿದ್ದಾರೆ. ಅಪಾಯದ ಮಟ್ಟದಲ್ಲಿ ಕಾವೇರಿ ನದಿಯು ಹರಿಯುತ್ತಿದ್ದರೂ ನದಿದಡದ

ಸಂದರ್ಭದಲ್ಲಿ ಕರಡಿಗೋಡು, ಗುಹ್ಯ ಗ್ರಾಮದ ನದಿದಡದ ನೂರಾರು ಮನೆಗಳು ಜಲಾವೃತಗೊಂಡು ಬಿರುಕು ಬಿಟ್ಟಿವೆ.

ಕಾಯುತ್ತಿರುವ ನಿವಾಸಿಗಳು : ಕರಡಿಗೋಡು ಗ್ರಾಮದ ನದಿದಡದ ನಿವಾಸಿಗಳು ಈ ಬಾರಿಯ ಮಹಾ ಮಳೆಗೆ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಹಿಂದೆಂದೂ ಕಾಣದಷ್ಟು ಪ್ರವಾಹ ಏರಿಕೆಯಾಗಿ ನದಿದಡದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ತಮ್ಮ ಪ್ರಾಣಗಳನ್ನು ಕೈಯಲ್ಲಿ ಹಿಡಿದುಕೊಂಡು ರಾತೋರಾತ್ರಿ ಮನೆ ಬಿಟ್ಟು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡರು. ಹಲವಾರು ಮಂದಿಯ ಮನೆಯ ಸಾಮಗ್ರಿಗಳು ನದಿ ಪಾಲಾದವು. ಪ್ರಾವಾಹದ ನೀರು ಇಳಿಮುಖಗೊಂಡ ನಂತರ ಮನೆಗಳಿಗೆ ತೆರಳಿದ ಕುಟುಂಬಗಳು ಮನೆ ನೋಡುತ್ತಿದ್ದಂತೆ ದು:ಖಿಸುತ್ತಿದ್ದಾರೆ. ಅಪಾಯದ ಮಟ್ಟದಲ್ಲಿ ಕಾವೇರಿ ನದಿಯು ಹರಿಯುತ್ತಿದ್ದರೂ ನದಿದಡದ ನಾರಾರು ಕಟುಂಬಗಳು ಸ್ವ ಇಚ್ಚೆಯಿಂದ ಸಭೆ ನಡೆಸಿ ತಾವು ಸರಕಾರ ಸುರಕ್ಷಿತ ಸ್ಥಳ ಒದಗಿಸಿಕೊಟ್ಟು ಶಾಶ್ವತ ಸೂರು ಒದಗಿಸಿಕೊಟ್ಟಲ್ಲಿ ಸ್ಥಳಾಂತರಗೊಳ್ಳಲು ಸಿದ್ಧರಿದ್ದೇವೆ ಎಂದು ನಿರ್ಧರಿಸಿ ಪಂಚಾಯಿತಿಗೆ ಲಿಖಿತ ರೂಪದಲ್ಲಿ ಸಹಿ ಹಾಕಿ ಮನವಿ ಪತ್ರವನ್ನು ನೀಡಿದ್ದಾರೆ.

ಶಾಶ್ವತ ಸೂರಿಗೆ ಒತ್ತಾಯ : ಕಳೆದ ಸುಮಾರು ವರ್ಷಗಳಿಂದ ತಮ್ಮ ಕುಟುಂಬಗಳೊಂದಿಗೆ ನದಿದಡದಲ್ಲಿ ವಾಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳು ನದಿ ದಡದಲ್ಲಿ ವಾಸಿಸುವದು ಅಪಾಯಕಾರಿ ಎಂದು ತಿಳಿದು ಸ್ಥಳಾಂತರಗೊಳ್ಳಲು ನಿರ್ಧರಿಸಿರುವದು ಉತ್ತಮ ಬೆಳವಣಿಗೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನದಿದಡದ ನಿವಾಸಿಗಳು ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿಕೊಂಡಿರುತ್ತಾರೆ. ಇದೀಗ ಮಹಾಮಳೆಯಿಂದಾಗಿ ನದಿದಡದ ನಿವಾಸಿಗಳು ತತ್ತರಿಸಿದ್ದಾರೆ. ಇವರಿಗೆ ಬದಲಿ ವ್ಯವಸ್ಥೆಯನ್ನು ಹಾಗೂ ಶಾಶ್ವತ ಸೂರುಗಳನ್ನು ಸುರಕ್ಷಿತ ಸ್ಥಳದಲ್ಲಿ ಒದಗಿಸಿಕೊಡಬೇಕೆಂದು ಕರಡಿಗೋಡುವಿನ ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ

ಇಲಾಖೆ ಪ್ರಯತ್ನ : ವರ್ಷಂಪ್ರತಿ ಮಳೆಗಾಲದ ಸಂದರ್ಭದಲ್ಲಿ ಕರಡಿಗೋಡಿನ ನದಿದಡದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುತ್ತಿರುವದು ವಾಡಿಕೆಯಾಗಿದೆ. ಮಳೆಗಾಲದ ಸಂದರ್ಭದಲ್ಲಿ ಕಾವೇರಿ ನದಿಯಲ್ಲಿ ಪ್ರವಾಹದ ನೀರು ಏರಿಕೆಯಾದ ಕೂಡಲೇ ಕಂದಾಯ ಇಲಾಖಾಧಿಕಾರಿಗಳು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ನದಿದಡದಲ್ಲಿ ವಾಸ್ತವ್ಯ ಹೂಡುವ ಮೂಲಕ ನಿವಾಸಿಗಳ ರಕ್ಷಣೆಗಾಗಿ ಹಾಗೂ ಅವರಿಗೆ ಬೇಕಾದ ಆಹಾರಗಳನ್ನು ಒದಗಿಸಿಕೊಡುವದೆ ತಲೆ ನೋವಾಗಿರುವ ಪ್ರಸಂಗ ಕೂಡ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಪ್ರವಾಹದಿಂದ ನದಿ ದಡದಲ್ಲಿ ಅನೇಕ ಮನೆಗಳು ಕುಸಿದಿದ್ದು, ನೂರಾರು ಮನೆಗಳು ಬಿರುಕು ಕಾಣಿಸಿಕೊಂಡು ಅಪಾಯದಲ್ಲಿವೆÉ. ಇದನ್ನು ಮನಗಂಡ ಕಂದಾಯ ಇಲಾಖಾಧಿಕಾರಿಗಳು ನದಿ ದಡದ ನಿವಾಸಿಗಳನ್ನು ಸ್ಥಳಾಂತರಗೊಳಿಸಲು ಈಗಾಗಲೇ ಸೂಕ್ತ ಜಾಗ ಗುರುತಿಸಿ. ಸ್ಥಳಾಂತರಗೊಳಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅಪಾಯದಲ್ಲಿರುವ ಎಲ್ಲಾ ಗ್ರಾವiದ ನದಿ ದಡದ ನಿವಾಸಿಗಳು ಅಪಾಯವಾಗುವ ಮುಂಚೆ ಜಿಲ್ಲಾಡಳಿತ ಒದಗಿಸಿಕೊಡುವ ಸುರಕ್ಷಿತ ಸ್ಥಳದಲ್ಲಿ ವಾಸಿಸುವದು ಸೂಕ್ತವೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.