ಸೋಮವಾರಪೇಟೆ,ಅ.1: ಮರ ತುಂಬಿದ ಲಾರಿ ಮತ್ತು ಪಿಕಪ್ ನಡುವೆ ಮಧ್ಯರಾತ್ರಿ ಸಂಭವಿಸಿದ ಅಪಘಾತದಲ್ಲಿ ಪಿಕಪ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಡಿಕೇರಿಯಿಂದ ಹಾಸನದ ಕಡೆಗೆ ತೆರಳುತ್ತಿದ್ದ ಟಿಂಬರ್ ಲಾರಿ ಮತ್ತು ಶನಿವಾರಸಂತೆಯಿಂದ ದೊಡ್ಡಮಳ್ತೆ ಗ್ರಾಮಕ್ಕೆ ಬರುತ್ತಿದ್ದ ಪಿಕಪ್ ನಡುವೆ ಕಾಗಡಿಕಟ್ಟೆ ಇಳಿಜಾರು ರಸ್ತೆಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪಿಕಪ್ ವಾಹನದ ಮುಂಭಾಗ ಜಖಂಗೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಿಕಪ್ ಚಾಲಕ ಮಣಿ ಸೋಮವಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.