ವೀರಾಜಪೇಟೆ, ಸೆ. 29: ಇಂದು ಬೆಳಿಗ್ಗೆ 8-45ರ ಸಮಯದಲ್ಲಿ ಕಣ್ಣಂಗಾಲ ಗ್ರಾಮದ ಶಶಿಕುಮಾರ್ ಎಂಬವರ ಮಗ ಕಾಶಿಯಪ್ಪ (6) ವೀರಾಜಪೇಟೆ, ಸೆ. 29: ಇಂದು ಬೆಳಿಗ್ಗೆ 8-45ರ ಸಮಯದಲ್ಲಿ ಕಣ್ಣಂಗಾಲ ಗ್ರಾಮದ ಶಶಿಕುಮಾರ್ ಎಂಬವರ ಮಗ ಕಾಶಿಯಪ್ಪ (6) ವೀರಾಜಪೇಟೆ, ಸೆ. 29: ಇಂದು ಬೆಳಿಗ್ಗೆ 8-45ರ ಸಮಯದಲ್ಲಿ ಕಣ್ಣಂಗಾಲ ಗ್ರಾಮದ ಶಶಿಕುಮಾರ್ ಎಂಬವರ ಮಗ ಕಾಶಿಯಪ್ಪ (6) (ಮೊದಲ ಪುಟದಿಂದ) ಅದೃಷ್ಟವಶಾತ್ ಮೊದಲು ತೆರಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಡಿ.ವೈ.ಎಸ್.ಪಿ ನಾಗಪ್ಪ, ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ, ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಭೇಟಿ ನೀಡಿ ಮಹಜರು ನಡೆಸಿದರು.ಪ್ರಕರಣ ದಾಖಲುಬಾಲಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ಅಮ್ಮತ್ತಿ ವಿಭಾಗದ ಉಪ ಸೆಸ್ಕಾಂ ಕಚೇರಿಯ ಕಿರಿಯ ಅಭಿಯಂತರ ರಮೇಶ್ ಹಾಗೂ ಲೈನ್‍ಮೆನ್ ಹಸನ್ ವಿರುದ್ಧ ಐ.ಪಿ.ಸಿ. 304 ಎ ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.ಅಧ್ಯಕ್ಷರಿಂದ ಸಾಂತ್ವನ

ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಘಟನೆಯ ಸ್ಥಳಕ್ಕೆ ಭೇಟಿ ನೀಡಿದ ನಂತರ ಶಶಿಕುಮಾರ್ ಕುಟುಂಬದ ಮನೆಗೆ ತೆರಳಿ ಸಾಂತ್ವನ ಹೇಳಿದರು.

ಕಚೇರಿ ಎದುರು ಪ್ರತಿಭಟನೆ

ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಶಿಯಪ್ಪ ಎಂಬ ಬಾಲಕ ಮರಣ ಹೊಂದಿದ್ದು ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಒತ್ತಾಯಿಸಿ ಶಶಿಕುಮಾರ್ ಕುಟುಂಬದ ಪರವಾಗಿ ಗ್ರಾಮಸ್ಥರು ಹಾಗೂ ಇಲ್ಲಿನ ಸಾರ್ವಜನಿಕರು ಎರಡೂವರೆ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಡಿ.ವೈ.ಎಸ್.ಪಿ ನಾಗಪ್ಪ ಅವರು ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳನ್ನು ಬಂಧಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ಪ್ರತಿಭಟನೆ ನಡೆಸುತ್ತಿದ್ದಾಗ ಕಚೇರಿಯ ಒಳ ನುಗ್ಗದಂತೆ ಪೊಲೀಸರು ತಡೆದರು. ಬಂದೋಬಸ್ತ್‍ನಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ, ಸಬ್‍ಇನ್ಸ್‍ಪೆಕ್ಟರ್‍ಗಳಾದ ಸಂತೋಷ್ ಕಶ್ಯಪ್, ಸುರೇಶ್ ಬೋಪಣ್ಣ ಇತರ ಪೊಲೀಸರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಏಜಾಜ್ ಅಹಮ್ಮದ್, ಮಹಮ್ಮದ್ ರಾಫಿ, ಎಂ.ಡಿ.ಸಲೀಂ, ಮುಕ್ತಾರ್, ಫಾರೂಕ್, ಜಲೀಲ್, ಇರ್ಷಾದ್, ಜಂóಷೀರ್, ಸಾರ್ವಜನಿಕರು ಹಾಗೂ ಮೃತ ಬಾಲಕನ ತಾಯಿ ಭಾಗ್ಯ, ಅವರ ವೃದ್ಧೆ ತಾಯಿ ರುಕ್ಮಿಣಿ, ಮಕ್ಕಳು ಪಾಲ್ಗೊಂಡಿದ್ದರು. ಮೃತ ಕುಟುಂಬಕ್ಕೆ ಸೆಸ್ಕಾಂನಿಂದ ತಾತ್ಕಾಲಿಕ ಪರಿಹಾರವಾಗಿ ರೂ 10,000 ನಗದು ನೀಡಲಾಯಿತು.

ವಿದ್ಯುತ್ ಸ್ಪರ್ಶದಿಂದ ಬಾಲಕನ ಸಾವು ಗ್ರಾಮದಲ್ಲಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಕೆಲವರು ಪಕ್ಕದಲ್ಲಿಯೇ ಇದ್ದ ಜಂಕ್ಷನ್ ಬಾಕ್ಸ್‍ನ್ನು ಪುಡಿ ಪುಡಿ ಮಾಡಿದರು.