ಗೋಣಿಕೊಪ್ಪ ವರದಿ, ಸೆ. 29 : ಬೆಳೆ ನಾಶ, ಅತೀವೃಷ್ಟಿ ಹಾಗೂ ಭೂಕುಸಿತದಿಂದ ಕಂಗೆಟ್ಟಿರುವ ಕೊಡಗಿನ ಜನರ ಜೀವನ ಸುಧಾರಿಸುವ ಉದ್ದೇಶವನ್ನಿಟ್ಟುಕೊಂಡು ಈ ಬಾರಿ ಆಚರಿಸಲು ಉದ್ದೇಶಿಸಿರುವ ಗೋಣಿಕೊಪ್ಪ ದಸರಾವನ್ನು ಧಾರ್ಮಿಕ ಪೂಜೆಯೊಂದಿಗೆ ಮಾತ್ರ ಆಚರಿಸಲು ಮುಂದಾಗಬೇಕು ಎಂದು ಕಾವೇರಿ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ಮನವಿ ಮಾಡಿದ್ದಾರೆ.

ಕಳೆದ ವರ್ಷ ಬರ, ಈ ವರ್ಷದ ಅತಿವೃಷ್ಟಿಯಿಂದಾಗಿ ಕೃಷಿಕರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇದರಿಂದಾಗಿ ವ್ಯಾಪಾರಸ್ಥರು ಕೂಡ ವ್ಯಾಪಾರವಿಲ್ಲದೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಭೂಕುಸಿತದಿಂದ ಮಡಿಕೇರಿ, ಸೋಮವಾರಪೇಟೆ ತಾಲೂಕಿನಲ್ಲಿ ಜನಜೀವನಕ್ಕೆ ಧಕ್ಕೆಯಾಗಿದೆ. ಇಷ್ಟೆಲ್ಲಾ ನೋವಿನ ನಡುವೆ ಮನರಂಜನೆಯ ದಸರಾ ಆಚರಣೆ ಬೇಡ ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಳೆದ ವರ್ಷ ಬರದಿಂದ ಶೇ. 50 ರಷ್ಟು ಬೆಳೆ ಕೃಷಿಕನಿಗೆ ದೊರೆಯಲಿಲ್ಲ. ಈ ವರ್ಷ ಅತಿವೃಷ್ಟಿಯಿಂದ ಶೇ. 75ರಷ್ಟು ಬೆಳೆನಾಶವಾಗಿದೆ. ಕಾಫಿ, ಕಾಳುಮೆಣಸು, ಅಡಕೆ ನಷ್ಟಗೊಂಡಿದೆ. ಹಣವಿಲ್ಲದೆ ಜನರು ಪಟ್ಟಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ವ್ಯಾಪಾರವಿಲ್ಲದ ಕಾರಣ ವರ್ತಕರು

ಎದುರಿಸುತ್ತಿದ್ದಾರೆ. ಭೂಕುಸಿತದಿಂದ ಮಡಿಕೇರಿ, ಸೋಮವಾರಪೇಟೆ ತಾಲೂಕಿನಲ್ಲಿ ಜನಜೀವನಕ್ಕೆ ಧಕ್ಕೆಯಾಗಿದೆ. ಇಷ್ಟೆಲ್ಲಾ ನೋವಿನ ನಡುವೆ ಮನರಂಜನೆಯ ದಸರಾ ಆಚರಣೆ ಬೇಡ ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.