ಕುಶಾಲನಗರ, ಸೆ 29: ಕಾಶಿ ಯಾತ್ರೆಗೆ ತೆರಳಿದ ಕುಶಾಲನಗರದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಸ್ಥಳೀಯ ಬಸಪ್ಪ ಬಡಾವಣೆ ನಿವಾಸಿ ಲಾರಿ ಚಾಲಕ ಜಿ.ಮಂಜುನಾಥ್ (38) ಮೃತಪಟ್ಟ ವ್ಯಕ್ತಿ.

60 ಮಂದಿ ಸದಸ್ಯರ ತಂಡದೊಂದಿಗೆ ಮಂಜುನಾಥ್ ತನ್ನ ತಾಯಿಯನ್ನು ಕರೆದೊಯ್ದಿದ್ದು ಕಾಶಿಯಲ್ಲಿ ಮಂಜುನಾಥ್ ಅವರಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿದ್ದು ದಿಢೀರನೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘದ ಸದಸ್ಯರಾಗಿರುವ ಮಂಜುನಾಥ್ ಪತ್ನಿ ಹಾಗೂ 1 ವರ್ಷದ ಪುತ್ರಿಯನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯನ್ನು ಕಾಶಿಯಲ್ಲಿ ನೆರವೇರಿಸಲು ನಿರ್ಧರಿಸಲಾಗಿದ್ದು ಕುಟುಂಬ ಸದಸ್ಯರು ತೆರಳಿದ್ದಾರೆ.