ಕುಶಾಲನಗರ, ಸೆ. 29: ಕೊಡಗು ಜಿಲ್ಲೆ ಮತ್ತು ಕೇರಳದಲ್ಲಿ ಸಂಭವಿಸಿದ ಪ್ರಕೃತಿ ದುರಂತದಲ್ಲಿ ನೊಂದ ಸಂತ್ರಸ್ತರ ಒಳಿತಿಗಾಗಿ ಬೈಲುಕೊಪ್ಪೆ ನಿರಾಶ್ರಿತ ಟಿಬೇಟಿಯನ್ನರು 7 ದಿನಗಳ ಕಾಲ ಸಾಮೂಹಿಕ ಪ್ರಾರ್ಥನೆ ಕೈಗೊಂಡಿ ದ್ದಾರೆ. ಬೈಲುಕೊಪ್ಪೆಯ ಸೆರಾಮೆ ಬೌದ್ಧ ವಿಶ್ವವಿದ್ಯಾಲಯದಲ್ಲಿ ಈ ತಿಂಗಳ 20 ರಿಂದ ಪ್ರಾರಂಭಗೊಂಡ ವಿಶೇಷ ಪೂಜಾ ಕಾರ್ಯಕ್ರಮ ನಿರಂತರ 7 ದಿನಗಳ ಕಾಲ ನಡೆದಿದೆ.
ದಿನನಿತ್ಯ 3 ಹಂತಗಳಲ್ಲಿ ಈ ವಿಶೇಷ ಪ್ರಾರ್ಥನೆ ನಡೆಸಲಾಯಿತು ಎಂದು ತಿಳಿಸಿರುವÀ ಧರ್ಮಗುರು ಗಳಾದ ಗೆಶೆ ತಶಿ ತ್ಸೆರಿಂಗ್ ಬುದ್ದನ ಅವತಾರವಾದ ಮೆಡಿಸನ್ ಬುದ್ದ ದೇವರಿಗೆ ಈ ಪೂಜೆ ಸಲ್ಲಿಸಲಾಗುತ್ತಿದೆ. ಪ್ರತಿವರ್ಷ ವಿಶ್ವ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದು ಈ ಬಾರಿ ನೆರೆ ಸಂತ್ರಸ್ತರ ಒಳಿತಿಗಾಗಿ ಪ್ರಾರ್ಥನೆ ನಡೆದಿದೆ. ಬೌದ್ಧ ಕೇಂದ್ರದ 1600 ಕ್ಕೂ ಅಧಿಕ ಬೌದ್ಧ ಭಿಕ್ಷುಗಳು ಈ ಕೈಂಕರ್ಯದಲ್ಲಿ ತೊಡಗಿದ್ದು ದೇವರಿಗೆ ವಿಶೇಷವಾಗಿ ತುಪ್ಪದ ದೀಪಗಳನ್ನು ಹಚ್ಚಿ ಮಂತ್ರಗಳನ್ನು ಪಠಿಸಲಾಗುತ್ತಿದೆ. ಪ್ರಾರ್ಥನೆ ನಡೆಯುವ ಸ್ಥಳದಲ್ಲಿ ದೀಪಗಳ ಅಲಂಕಾರ, ಹಣ್ಣು, ಬಿಸ್ಕತ್ ಮತ್ತಿತರ ವಿಶೇಷ ಖಾದ್ಯಗಳನ್ನು ಇರಿಸಿ ಪೂಜಾ ಕಾರ್ಯಕ್ರಮ ನಡೆದಿದೆ ಎಂದು ಗÉಶೆ ತ್ಸೆರಿಂಗ್ ತಿಳಿಸಿದ್ದಾರೆ.
ಇದೇ ಸಂದರ್ಭ ಕೇರಳ ಮತ್ತು ರಾಜ್ಯದಲ್ಲಿ ಹಾನಿಗೀಡಾದ ಪ್ರದೇಶಗಳಿಗೂ ಭಿಕ್ಷುಗಳ ತಂಡ ತೆರಳಿ ಭೇಟಿ ನೀಡಿದೆ. ಸಂತ್ರಸ್ತರಿಗೆ ಅಂದಾಜು 6 ಲಕ್ಷಕ್ಕಿಂತಲೂ ಅಧಿಕ ಮೌಲ್ಯದ ಬಟ್ಟೆ, ಬರೆ ಔಷಧ, ಆಹಾರ ಪದಾರ್ಥಗಳನ್ನು ವಿತರಿಸಲಾಗಿದೆ ಎಂದರು.