ಕುಶಾಲನಗರ, ಸೆ 29: ಕುಶಾಲನಗರ ರೋಟರಿ ಇನ್ನರ್ ವೀಲ್ ವತಿಯಿಂದ ವಿವಿಧ ಶಾಲೆಗಳ ಶಿಕ್ಷಕರಿಗೆ ಶಾಲೆ ಮೆಚ್ಚಿದ ಶಿಕ್ಷಕ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು. ಕುಶಾಲನಗರ ರೋಟರಿ ಸಭಾಂಗಣದಲ್ಲಿ ನಡೆದ ನ್ಯಾಷನಲ್ ಬಿಲ್ಡರ್ ಅವಾರ್ಡ್-2018 ಸಮಾರಂಭದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಸರಕಾರಿ ಮತ್ತು ಖಾಸಗಿ ಶಾಲೆಗಳ ಒಟ್ಟು 15 ಶಿಕ್ಷಕ, ಶಿಕ್ಷಕಿಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

ರೋಟರಿ ಅಧ್ಯಕ್ಷ ಜೇಕಬ್ ಮತ್ತು ಇನ್ನರ್ ವೀಲ್ ಅಧ್ಯಕ್ಷೆ ಸುನಿತಾ ಮಹೇಶ್ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಣಿವೆ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಿ. ಕಸ್ತೂರಿ, ಕುಶಾಲನಗರದ ನೀಲಮ್ಮ, ಬಸವನಹಳ್ಳಿಯ ಬಿ.ಎಂ. ಭಾನು, ಗುಮ್ಮನಕೊಲ್ಲಿಯ ಎ.ಸಿ. ಶಾಂತಿ, ಕೂಡಿಗೆಯ ವಿಜಯಲಕ್ಷ್ಮಿ, 7ನೇ ಹೊಸಕೋಟೆಯ ಪಿ.ಆರ್. ದಿವ್ಯ, ಕೂಡಿಗೆಯ ಸುಮಿತ್ರಾ, ಬೈಚನ ಹಳ್ಳಿಯ ಬಿ.ಎನ್. ಗೀತಾ, ಕೂಡು ಮಂಗಳೂರು ಶಾಲೆಯ ಬಿ.ವಿ. ಗಣೇಶ್, ಬೈಲಕುಪ್ಪೆಯ ಉಷಾ, ದೊಡ್ಡತ್ತೂರು ಶಾಲೆಯ ಕೆ.ಕೆ. ಜಯಣ್ಣ, ಹುಲುಗುಂದದ ವಸಂತ್, ಮುಳ್ಳುಸೋಗೆಯ ಕೆ.ಎನ್. ಸರೋಜ, ಗುಡ್ಡೆಹೊಸೂರಿನ ರುಕ್ಮಿಣಿ ಹಾಗೂ ಮಾದಾಪಟ್ಟಣ ಶಾಲೆಯ ಪಿ.ಎಂ. ಮೀನಾಕ್ಷಿ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ವಿಜೇತರಾದ ಟಿ.ಜಿ. ಪ್ರೇಮ್ ಕುಮಾರ್ ಅವರನ್ನು ಸನ್ಮಾನಿಸ ಲಾಯಿತು. ರೋಟರಿ ಕಾರ್ಯದರ್ಶಿ ಪ್ರೇಮ್ ಚಂದ್ರನ್, ಇನ್ನರ್ ವೀಲ್ ಕಾರ್ಯದರ್ಶಿ ಸಂಧ್ಯಾ ಪ್ರಮೋದ್, ಖಜಾಂಚಿ ತೇಜಸ್ವಿನಿ ಗೌತಮ್, ರೋಟರಿ ಸದಸ್ಯರುಗಳಾದ ಡಾ. ಹರಿ ಎ. ಶೆಟ್ಟಿ, ಕ್ರಿಜ್ವಲ್ ಕೋಟ್ಸ್, ಮಹೇಶ್ ನಾಲ್ವಡೆ, ರೇಖಾ ಗಂಗಾಧರ್, ಆರತಿ ಎ. ಶೆಟ್ಟಿ ಇದ್ದರು. ರೋಟರಿ ಕಾರ್ಯ ಕ್ರಮ ಸಂಯೋಜಕ ಎಂ.ಡಿ. ರಂಗ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.