ವೀರಾಜಪೇಟೆ, ಸೆ. 28: ವೀರಾಜಪೇಟೆಯಲ್ಲಿರುವ ಕೊಡಗು ಮುಸ್ಲಿಂ ಸಹಕಾರ ಸಂಘಕ್ಕೆ 2017-18ನೇ ಸಾಲಿನಲ್ಲಿ ಒಟ್ಟು ರೂ. 3,92,714 ಲಾಭ ಬಂದಿದ್ದು, ಸದಸ್ಯರುಗಳ ಒತ್ತಾಯದ ಮೇರೆಗೆ ಈ ಸಾಲಿನಿಂದಲೇ ಅನ್ವಯವಾಗುವಂತೆ ಸಂಘದಲ್ಲಿ ಮರಣ ನಿಧಿಯನ್ನು ಸ್ಥಾಪಿಸಲಾಗುವದು. ಸಂಘದ ಮಹಾಸಭೆಯ ಊಟದ ಭತ್ಯೆ ಪೈಕಿ ಸದಸ್ಯರ ತಲಾ ರೂ. 50ನ್ನು ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ನೀಡಲಾಗುವದು ಎಂದು ಸಂಘದ ಅಧ್ಯಕ್ಷ ಬಿ.ಆರ್. ಮಹಮ್ಮದ್ ಶುಹೇಬ್ ಬಾಬು ಹೇಳಿದರು.

ಇಲ್ಲಿನ ಪುರಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಮ್ಮದ್ ವೀರಾಜಪೇಟೆ, ಸೆ. 28: ವೀರಾಜಪೇಟೆಯಲ್ಲಿರುವ ಕೊಡಗು ಮುಸ್ಲಿಂ ಸಹಕಾರ ಸಂಘಕ್ಕೆ 2017-18ನೇ ಸಾಲಿನಲ್ಲಿ ಒಟ್ಟು ರೂ. 3,92,714 ಲಾಭ ಬಂದಿದ್ದು, ಸದಸ್ಯರುಗಳ ಒತ್ತಾಯದ ಮೇರೆಗೆ ಈ ಸಾಲಿನಿಂದಲೇ ಅನ್ವಯವಾಗುವಂತೆ ಸಂಘದಲ್ಲಿ ಮರಣ ನಿಧಿಯನ್ನು ಸ್ಥಾಪಿಸಲಾಗುವದು. ಸಂಘದ ಮಹಾಸಭೆಯ ಊಟದ ಭತ್ಯೆ ಪೈಕಿ ಸದಸ್ಯರ ತಲಾ ರೂ. 50ನ್ನು ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ನೀಡಲಾಗುವದು ಎಂದು ಸಂಘದ ಅಧ್ಯಕ್ಷ ಬಿ.ಆರ್. ಮಹಮ್ಮದ್ ಶುಹೇಬ್ ಬಾಬು ಹೇಳಿದರು.

ಇಲ್ಲಿನ ಪುರಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಮ್ಮದ್ ಪಥದಲ್ಲಿ ಮುನ್ನಡೆಯುತ್ತಿದೆ, ಸಂಘ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲು ಸದಸ್ಯರುಗಳ ಪರಸ್ಪರ ಸಹಕಾರ ಅಗತ್ಯ ಎಂದರು. ಇದೇ ಸಂದರ್ಭ ಎಸ್.ಎಸ್. ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರುಗಳ ಮಕ್ಕಳಾದ ಎಸ್.ಕೆ. ಶೀಜಾ ಮಹಕ್, ಹಾಗೂ ಪಿ.ಯು. ಫಸೀನಾ ಇವರುಗಳಿಗೆ ಬಹುಮಾನ ನೀಡಿ ಗೌರವಿಸ ಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕನ್ನಡಿಯಂಡ ಎ. ಜುಬೇರ್, ನಿರ್ದೇಶಕರುಗಳಾದ ಎಸ್.ಹೆಚ್. ಮೊೈನುದ್ದೀನ್, ಹೆಚ್. ಅಬ್ದುಲ್ ಸತ್ತಾರ್, ಎಂ.ಎಸ್, ಮಹಮ್ಮದ್ ಶಫಿ, ಕೆ.ಎ. ಅಬೂ ಸಾಲೆಹ, ಎ.ಕೆ. ಜಬೀವುಲ್ಲಾ, ಎಂ.ಕೆ. ನಜೀಬ್, ಎಂ.ಎ. ಮನ್ಸೂರ್ ಆಲಿ, ಎಂ.ಎ. ಜಿಯಾವುಲ್ಲಾ, ಎಂ.ಎ. ಮಹಮ್ಮದ್ ಯೂಸೂಫ್, ಎಂ.ಪಿ. ಅಲ್ತಾಫ್, ಜೆ.ಎಸ್. ಸಮೀವುಲ್ಲಾ, ಮಹಿಳಾ ನಿರ್ದೇಶಕರುಗಳಾದ ಅಬೀದಾ ಬೇಗಂ, ಡಿ. ತಸ್ನೀಂ ಅಕ್ತರ್ ಹಾಗೂ ಬ್ಯಾಂಕ್‍ನ ವ್ಯವಸ್ಥಾಪಕ ಕೆ.ಐ. ಮುಕ್ತಾರ್ ಅಹಮ್ಮದ್ ಉಪಸ್ಥಿತರಿದ್ದರು.