ಸುಂಟಿಕೊಪ್ಪ, ಸೆ. 28: ಅತಿವೃಷ್ಟಿಯಿಂದ ತೊಂದರೆಗೊಳಗಾಗಿರುವ ಕೂಲಿ ಕಾರ್ಮಿಕರನ್ನು ಬಡ ರೈತರನ್ನು ಮೂಲವಾಗಿರಿಸಿಕೊಂಡು ಇವರ ಕುಟುಂಬದ ಸದಸ್ಯರಿಗೆ ಕೆಲವು ಆಮಿಷಗಳನ್ನು ತೋರಿಸುವ ಮೂಲಕ ಗೋಣಿಕೊಪ್ಪದಲ್ಲಿ ಕ್ರೈಸ್ತ ಮಿಷನರಿಗಳ ಮತಾಂತರ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸೋಮವಾರಪೇಟೆ ತಾಲೂಕು ಮತ್ತು ಮಡಿಕೇರಿ ತಾಲೂಕಿನಲ್ಲಿ ಬಹಳ ಜನ ನಿರಾಶ್ರಿತರು ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ, ಇಂತವರನ್ನು ಗುರಿಯಾಗಿಸಿಕೊಂಡು ಆಮಿಷಗಳನ್ನು ತೋರಿಸುವ ಮೂಲಕ ಮತಾಂತರ ಮಾಡುವವರನ್ನು ಕಂಡು ಬಂದಲ್ಲಿ ಕೂಡಲೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಈ ಭಾಗದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿರುವವರ ಮಧ್ಯೆ ಕೋಮು ಬಾವನೆ ಉದ್ಭವಿಸಲು ಪ್ರಯತ್ನ ನಡೆಸುವವರನ್ನು ಬಂಧಿಸಿ ಜಾಮೀನು ರಹಿತ ಉಗ್ರ ಶಿಕ್ಷೆ ನೀಡಬೇಕು ಎಂದು ಸುಂಟಿಕೊಪ್ಪ ನಗರ ಬಿಜೆಪಿ ಅಧ್ಯಕ್ಷ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ,ಯುವ ಮೋರ್ಚ ತಾಲೂಕು ಸಮಿತಿ ಸದಸ್ಯ ಅಶೋಕ್, ಮೊಳೂರು ವಿಜಯ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಸದಸ್ಯರಾದ ಅಂಬೆಕಲ್ ಚಂದ್ರ, ಸತೀಶ, ಗ್ರಾಮಸ್ಥರಾದ ಮಿಲನ್, ಬಿಜೆಪಿ ಕಾರ್ಯಕರ್ತ ಎನ್.ಮೋಹನ, ಪುನೀತ್ ದೇವೆಂದ್ರ ಸುರೇಶ, ಹರೀಶ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.