ಮಡಿಕೇರಿ, ಸೆ. 28: ತನ್ನ ಪತ್ನಿಯೊಂಧಿಗೆ ಅನೈತಿಕ ಸಂಬಂಧ ಹೊಂದಿದ್ದನೆನ್ನಲಾದ ವ್ಯಕ್ತಿಯೊಬ್ಬನನ್ನು ಅದೇ ತೋಟದಲ್ಲಿ ಕೆಲಸಕ್ಕಿದ್ದ ಪತಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದು, ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಆ ಮೇರೆಗೆ ಸಿದ್ದಾಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ಕ್ರಮ ಜರುಗಿಸಿದ್ದಾರೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚೆನ್ನಂಗಿ ಗ್ರಾಮದ ಕೆ. ಪುತ್ರ ಪೂಣಚ್ಚ ಎಂಬವರ ತೋಟದ ಲೈನ್‍ಮನೆಯಲ್ಲಿ ಪಿರಿಯಾಪಟ್ಟಣ ಬಳಿಯ ಹೆಬ್ಬಲಸೆ ನಿವಾಸಿ ಅವಿವಾಹಿತ ಅಶೋಕ್ (26) ಎಂಬಾತ ಕಾರ್ಮಿಕನಾಗಿದ್ದ. ಅದೇ ತೋಟದಲ್ಲಿ ಹುಣಸೂರು ಬಳಿಯ ಮೇಲುಕುಪ್ಪೆ ಹನಗೋಡು ಎಂಬಲ್ಲಿನ ಬೋಜಪ್ಪ ಕೂಡ ಕೆಲಸಕ್ಕಿದ್ದನೆಂದು ಗೊತ್ತಾಗಿದೆ.

ತಾ. 23 ರಂದು ರಾತ್ರಿ ಬೋಜಪ್ಪ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಅಶೋಕ್ ಜತೆಯಲ್ಲಿ ಕಲಹಕ್ಕಿಳಿದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುª Àದರೊಂದಿಗೆ ಕತ್ತಿಯಿಂದ ತಲೆಗೆ ಕಡಿದ ಪರಿಣಾಮ ಮಾರಣಾಂತಿಕ ಗಾಯ ಗೊಂಡು, ಅಶೋಕ್‍ನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಬೆನ್ನಲ್ಲೇ ಪೊಲೀಸÀರು ಅಪರಾಧ ಕಾಯ್ದೆ 307ರಡಿ ಪ್ರಕರಣ ದಾಖಲಿಸುವದರೊಂದಿಗೆ ಬೋಜಪ್ಪನನ್ನು ಬಂದಿಸಿದ್ದಾರೆ. ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಕೊನೆಯುಸಿರೆಳೆದಿದ್ದು, ಆ ಮೇರೆಗೆ ಪೊಲೀಸರು ಕಾಯ್ದೆ 302ರ ಅನ್ವಯ ಕೊಲೆ ಮೊಕದ್ದಮೆಯಾಗಿ ಮರು ಪ್ರಕರಣ ದಾಖಲಿಸುವ ದರೊಂದಿಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.