ಮಡಿಕೇರಿ, ಸೆ. 27: ಜಾಹೀರಾತು ಏಜೆನ್ಸಿ ‘ಶ್ಯೂರ್‍ವೇವ್ಸ್ ಮೀಡಿಯಾಟೆಕ್’ ಚಿತ್ತಾರ ದೃಶ್ಯವಾಹಿನಿ ಮೂಲಕ, ಸಂತ್ರಸ್ತರ 16 ಸಂತ್ರಸ್ತ ಕುಟುಂಬಗಳಿಗೆ ವಿತರಿಸಿತು. ಚಿತ್ತಾರದ ವ್ಯವಸ್ಥಾಪಕ ನಿರ್ದೇಶಕಿ ಬಿ.ಆರ್. ಸವಿತಾ ರೈ ಮತ್ತು ನಿರ್ದೇಶಕ ಆನಂದ್ ಕೊಡಗು ಸಾಮಗ್ರಿಗಳನ್ನು ವಿತರಿಸಿದರು.

ಸೀನಿಯರ್ ಸರ್ವೀಸ್ ಇಂಜಿನಿ ಯರ್ ರವಿಕುಮಾರ್ ಪ್ರಯತ್ನದಿಂದ ಸಂಗ್ರಹಿಸಲಾದ ಬಕೆಟ್, ಮಗ್, ಬೆಡ್‍ಶೀಟ್, ಅಲ್ಯೂಮಿನಿಯಂ ಪಾತ್ರೆ, ಸಕ್ಕರೆ, ಬೇಳೆ, ಎಣ್ಣೆ, ವಾಷಿಂಗ್ ಪೌಡರ್, ಟವೆಲ್, ಚಾಪೆ, ಕುಕ್ಕರ್ ಮತ್ತಿತರ ಸಾಮಗ್ರಿಗಳ ಕಿಟ್‍ಗಳನ್ನು ಸಂತ್ರಸ್ತರು ಪಡೆದುಕೊಂಡರು.

ಬೆಂಗಳೂರಿನಿಂದ ಕೆಎಸ್ಸಾರ್ಟಿಸಿ ಪಾರ್ಸೆಲ್ ಮೂಲಕ ಸಾಮಗ್ರಿಗಳನ್ನು ಮಡಿಕೇರಿಗೆ ಕಳುಹಿಸಿದ್ದು, ಇಲ್ಲಿನ ಡಿಪೋ ವ್ಯವಸ್ಥಾಪಕಿ ಗೀತಾ ಅವರು ಶುಲ್ಕವಿಲ್ಲದೆ, ನಗರಸಭೆಯ ಸದಸ್ಯೆ ಸಂಗೀತಾ ಪ್ರಸನ್ನ ಮೂಲಕ ಚಿತ್ತಾರ ಕಚೇರಿಗೆ ತಲಪಿಸಿದ್ದಾರೆ. ಮನೆಗಳನ್ನು ಕಳೆದುಕೊಂಡ ಮಕ್ಕಂದೂರು ಗ್ರಾಮದ ಉದಯಗಿರಿಯ ದೇವಕಿ, ಪದ್ಮಾವತಿ, ವಾಸು, ರಾಮಣ್ಣ, ಸರೋಜ, ಮಂಜುನಾಥ್, ರಾಮಚಂದ್ರ, ಮಡಿಕೇರಿ ಇಂದಿರಾನಗರದ ಕಲಾ, ವೇದಾವತಿ, ಫಾತಿಮಾ, ಮೆಹರುನ್ನೀಸಾ, ಎಂ.ಪಿ. ಚಂಗಪ್ಪ, ಪತ್ರಕರ್ತರಾದ ಹಟ್ಟಿಹೊಳೆಯ ವಿನೋದ್, ಕಾಟಕೇರಿಯ ಲೋಕೇಶ್ ಮತ್ತಿತರರು ಕಿಟ್‍ಗಳನ್ನು ಪಡೆದು ಕೊಂಡರು. ಈ ವೇಳೆ ಚಿತ್ತಾರ ವರದಿ ಗಾರ ಸಂತೋಷ್ ರೈ ಹಾಜರಿದ್ದರು.