ಗುಡ್ಡೆಹೊಸೂರು, ಸೆ. 27: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ ಸಮುದಾಯ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ವಿ. ಮೋಹನ್ಕುಮಾರ್ ವಯಿಸಿದ್ದರು. ಈ ಸಭೆಗೆ ಮುಖ್ಯ ಅತಿಥಿಗಳಾಗಿ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಟಿ. ಅರುಣ್ಕುಮಾರ್ ಮತ್ತು ಸಹಾಯಕ ವ್ಯವಸ್ಥಾಪಕ ಹೆಚ್.ಎ. ಪ್ರಕಾಶ್ ಆಗಮಿಸಿದ್ದರು.
ಸಂಘದ ಕಾರ್ಯದರ್ಶಿ ಬಿ.ಪಿ. ಗುರುಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಬಿ.ಸಿ. ಸತೀಶ್ ಸ್ವಾಗತಿಸಿದರು. ಉಪಾಧ್ಯಕ್ಷ ಎ.ಯು. ಕಿರಣ್ ಮತ್ತು ನಿರ್ದೇಶಕರಾದ ಪಿ.ಬಿ. ಯತೀಶ್, ಬಿ.ಎಸ್. ಧನಪಾಲ್, ಪಿ.ಬಿ. ಕಾವೇರಪ್ಪ, ಬಿ.ಡಿ. ವೀರೇಂದ್ರ, ಬಿ.ಎಂ. ಸಾಗರ್, ಬಿ.ಸಿ. ಸತೀಶ್, ಸಿ.ಬಿ. ಪಳಂಗಪ್ಪ, ಕೆ.ಎಸ್. ಭಾರತಿ, ಎಸ್.ಜಿ. ಸುಲೋಚನ, ಎಸ್.ಆರ್. ಕಮಲ ಮುಂತಾದವರು ಹಾಜರಿದ್ದರು.
-ಗಣೇಶ್ ಕುಡೆಕ್ಕಲ್