ಮೂರ್ನಾಡು, ಸೆ. 27: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಗಾಯತ್ರಿ ಚಾರಿಟೇಬಲ್ ಟ್ರಸ್ಟ್ ವೀರಾಜಪೇಟೆ ಇವರ ವತಿಯಿಂದ ಚಿಣ್ಣರ ಚಿಲುಮೆ ಅಡಿಯಲ್ಲಿ ಪಂಜರದೊಳಗೆ ಪ್ರತಿಭಾವಂತ ಮಕ್ಕಳು ನಾಟಕ ಪ್ರದರ್ಶನ ನಡೆಯಿತು.
ಇಲ್ಲಿನ ಸರಕಾರಿ ಪ್ರೌಢಶಾಲೆ ಯಲ್ಲಿ ಆಯೋಜಿಸಲಾದ ನಾಟಕ ಪ್ರದರ್ಶನದಲ್ಲಿ ಮಕ್ಕಳೆ ಬರೆದ ಕಥೆಯ ಭಾಗವನ್ನು ಆಯ್ದು ಮಕ್ಕಳೆ ನಟಿಸಿರುವ ನಾಟಕವನ್ನು ಪ್ರದರ್ಶಿಸಿ ದರು. ನಾ. ಶ್ರೀನಿವಾಸ್ ಅವರ ನಿರ್ದೇಶನದೊಂದಿಗೆ ಬೆಂಗಳೂರಿನ ಕ್ಯಾಟ್ಸ್ ರಂಗ ಸಂಪನ್ಮೂಲ ಸಹಕಾರ ದೊಂದಿಗೆ ಮಕ್ಕಳು ನಾಟಕದ ತರಬೇತಿ ಪಡೆದು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಮೂರ್ನಾಡು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ದೇಚಮ್ಮ ಹಿತವಚನ ನುಡಿದು ನಾಟಕ ಅತ್ಯಂತ ಸುಂದರ ಹಾಗೂ ಸ್ಪೂರ್ತಿದಾಯಕವಾಗಿ ರೂಪು ಗೊಂಡಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.