ಸೋಮವಾರಪೇಟೆ, ಸೆ. 27: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆರನಕಟ್ಟೆಯ ಆರ್.ಕೆ.ಎಂ. ಕಾನ್ವೆಂಟ್ ಸ್ಕೂಲ್‍ನ ವತಿಯಿಂದ ಪರಿಹಾರ ರೂಪದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಹಿರಿಯೂರಿನ ಆರನಕಟ್ಟೆಯಿಂದ ಆರ್.ಕೆ.ಎಂ. ಕಾನ್ವೆಂಟ್ ಸ್ಕೂಲ್‍ನ ಆಡಳಿತ ಮಂಡಳಿಯ ಕಾರ್ಯದರ್ಶಿ ವೆಂಕಟೇಶ್ ನೇತೃತ್ವದಲ್ಲಿ ಆಗಮಿಸಿದ ತಂಡ ಸಂತ್ರಸ್ತ ಕುಟುಂಬಕ್ಕೆ ನೀಡಲು ಅಕ್ಕಿ, ಬಕೆಟ್, ಕೊಡಪಾನ, ಹಾಲಿನ ಪುಡಿ ಸೇರಿದಂತೆ ದಿನಸಿ ಸಾಮಗ್ರಿ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳ ಕಿಟ್‍ಗಳನ್ನು ತಂತಿಪಾಲ, ಮೇಘತಾಳು ಗ್ರಾಮ ವ್ಯಾಪ್ತಿಯಲ್ಲಿ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ವಿತರಿಸಿದರು.

ತಂಡದ ಮಾರ್ಗದರ್ಶಕಿ ಯಾಗಿದ್ದ ಶನಿವಾರಸಂತೆ ಸುಪ್ರಜಾ ಗುರುಕುಲ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕಿ ಸುಜಲಾದೇವಿ ನೊಂದ ಕುಟುಂಬ ಗಳಿಗೆ ಸಾಂತ್ವನ ಹೇಳುವ ಮೂಲಕ ಧೈರ್ಯ ತುಂಬಿದರು. ತಂಡದಲ್ಲಿ ಆರ್.ಕೆ.ಎಂ. ಕಾನ್ವೆಂಟ್‍ನ ಶಿಕ್ಷಕರುಗಳಾದ ಕುಮಾರಸ್ವಾಮಿ, ಮಲ್ಲಯ್ಯ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು, ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸಿ. ಬಿ. ಸುರೇಶ್‍ಶೆಟ್ಟಿ, ಪದಾಧಿಕಾರಿಗಳಾದ ದೊರೆ, ಅದಿಲ್, ಇದ್ದರು.