ಮಡಿಕೇರಿ, ಸೆ. 27: ಮಡಿಕೇರಿಯ ಕೈಗಾರಿಕಾ ಬಡಾವಣೆಯಲ್ಲಿ ಜನದಟ್ಟಣೆಯೊಂದಿಗೆ ಪ್ರತಿನಿತ್ಯ ಇಲ್ಲಿನ ಕಾರ್ಮಿಕರ ಸಹಿತ ನೂರಾರು ಶಾಲಾ-ಕಾಲೇಜು ಮಕ್ಕಳು ತೆರಳುವ ರಸ್ತೆಯ ನಡುವೆ ಶಿಥಿಲಗೊಂಡಿರುವ ವಿದ್ಯುತ್ ಕಂಬವೊಂದಿದ್ದು, ಅಪಾಯ ಎದುರಾಗುವ ಮುನ್ನ ಕೆಇಬಿಯಿಂದ ಬದಲಾಯಿಸುವಂತೆ ಬಡಾವಣೆಯ ನಾಗರಿಕರು ಆಗ್ರಹಿಸಿದ್ದಾರೆ.
ಈಗ ಬದಲಾಗಿರುವ ಬಸ್ ನಿಲ್ದಾಣದ ನಡುವೆ ಕೈಗಾರಿಕಾ ಬಡಾವಣೆಗೆ ವಿವಿಧ ಸಾಮಗ್ರಿಗಳನ್ನು ತರುವ ಲಾರಿಗಳ ಸಹಿತ ಬಸ್‍ಗಳ ಓಡಾಟವೂ ಈ ಮಾರ್ಗದಲ್ಲಿ ನಿತ್ಯ ಓಡಾಡುವಂತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಗಮನ ಸೆಳೆದಿದ್ದಾರೆ. ಹೀಗಾಗಿ ಅಪಾಯ ಎದುರಾಗುವ ಮುನ್ನ ಸರಕಾರಿ ಮುದ್ರಣಾಲಯ ಬಳಿಯ ಈ ವಿದ್ಯುತ್ ಕಂಬವನ್ನು ಸಂಬಂಧಿಸಿದ ಕೆಇಬಿಯವರು ಗಮನ ಹರಿಸಿ ಅಪಾಯ ಎದುರಾಗುವ ಮುನ್ನ ಸ್ಥಳಾಂತರಿಸಲಿ ಎಂದು ಒತ್ತಾಯಿಸಿದ್ದಾರೆ.