ಶ್ರೀಮಂಗಲ, ಸೆ. 27: ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ದೇವಣಗೇರಿಯ ಬಿ.ಸಿ ಹೈಸ್ಕೂಲ್ನಲ್ಲಿ ತಾ. 29 ರಂದು ಅಪರಾಹ್ನ 1.30 ಗಂಟೆಗೆ ಬಿ.ಸಿ ಹೈಸ್ಕೂಲ್ ಸಭಾಂಗಣದಲ್ಲಿ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯ ಲೇಖಕಿ ಕೊಟ್ಟಂಗಡ ಅಮ್ಮಕ್ಕಿ ಪೂವಯ್ಯ ಬರೆದ 155ನೇ ಹೆಜ್ಜೆಯ ನೂತನ ಪುಸ್ತಕ ಹಾಗೂ ಲೇಖಕ ಚೆಂಬಾಂಡ ಶಿವಿ ಭೀಮಯ್ಯ ಬರೆದ 156ನೇ ಹೆಜ್ಜೆಯ ನೂತನ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.
ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧÀ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯ ಹಾಗೂ ದೇವಣಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ, ಪುಸ್ತಕ ಪ್ರಾಯೋಜಕರು ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಬೀನಂಡ ಪೂಣಚ್ಚ, ದೇವಣಗೇರಿ ಬಿ.ಸಿ ಹೈಸ್ಕೂಲ್ ಆಡಳಿತ ಮಂಡಳಿಯ ಅಧ್ಯಕ್ಷ ಮುಕ್ಕಾಟಿರ ಸುನಿಲ್ ನಾಣಯ್ಯ ಮತ್ತಿತರರು ಭಾಗವಹಿಸಲಿದ್ದಾರೆ.
ಈ ಸಂದÀರ್ಭ ಕೊಡವ ಭಾಷೆಯಲ್ಲಿ ಹಾಡುಗಾರಿಕೆ, ಕೊಡವ ಭಾಷೆಯಲ್ಲಿ ಓದುವ ಸ್ಪರ್ಧೆ ಹಾಗೂ ಕೊಡವ ಭಾಷೆಯಲ್ಲಿ ಆಶು ಭಾಷಣ ಸ್ಪರ್ಧೆಗಳನ್ನು ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕ ಎಂಬ ಮೂರು ಪ್ರತ್ಯೇಕ ವಿಭಾಗದಲ್ಲಿ ನಡೆಸಲಾಗುವದು.