ಭಾಗಮಂಡಲ, ಸೆ. 27: ಇಲ್ಲಿನ ಭಗಂಡೇಶ್ವರ ದೇವಾಲಯದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮ ನಡೆಯಿತು. ಭಾಗಮಂಡಲದ ಬಳ್ಳಡ್ಕ ಕುಟುಂಬಸ್ಥರು ಕುಟುಂಬದ ಐನ್ಮನೆಯಲ್ಲಿ ಸೇರಿ ಪತ್ತಾಯಕ್ಕೆ ಅಕ್ಕಿ ಹಾಕುವದರೊಂದಿಗೆ ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ದೊರೆತಂತಾಗಿದೆ. ಗುರುವಾರ ಬೆಳಿಗ್ಗೆ ಕನ್ಯಾ ಲಗ್ನದಲ್ಲಿ 7.15ಕ್ಕೆ ಪತ್ತಾಯಕ್ಕೆ ಅಕ್ಕಿ ಹಾಕುವ ಸಂಪ್ರದಾಯ ನೆರವೇರಿತು. ಅಕ್ಟೋಬರ್ 5ರಂದು ಶುಕ್ರವಾರ ಕೃತಿಕಾ ಲಗ್ನದಲ್ಲಿ ಆಜ್ಞಾ ಮುಹೂರ್ತ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಈ ಸಂದರ್ಭ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ, ಕಾರ್ಯನಿರ್ವ ಹಣಾಧಿಕಾರಿ ಜಗದೀಶ್, ಪಾರುಪತ್ತೆಗಾರ ಪೊನ್ನಣ್ಣ ಹಾಗೂ ಇನ್ನಿತರರು ಇದ್ದರು.