ಗೋಣಿಕೊಪ್ಪ ವರದಿ, ಸೆ. 27: ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಠದಿಂದ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಜಾಗೃತಿ ಕಾರ್ಯಕ್ರಮ ತಿತಿಮತಿ ಚೀನಿಹಡ್ಲು ಹಾಡಿಯಲ್ಲಿ ನಡೆಸಲಾಯಿತು.
ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾ. ನವೀನ್ ಕುಮಾರ್ ಮಾತನಾಡಿ, ಗಿರಿಜನರು ಸರ್ಕಾರ ಕೈಗೊಂಡಿರುವ ಆಯುಷ್ಮಾನ್ ಯೋಜನೆಯ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಈ ಸಂದರ್ಭ ಡಾ. ನವೀನ್ ಕುಮಾರ್ ಹಾಗೂ ಡಾ. ಧ್ಯಾನ್ ಗಿರಿಜನರ ಆರೋಗ್ಯ ತಪಾಸಣೆ ನಡೆಸಿದರು. ಈ ಸಂದರ್ಭ ಜಿ.ಪಂ. ಸದಸ್ಯ ಶಶಿ ಸುಬ್ರಮಣಿ, ಬಿಜೆಪಿ ಮುಖಂಡ ಸಿ.ಎ. ಮಾಚಯ್ಯ, ಗ್ರಾ.ಪಂ. ಸದಸ್ಯ ಅನೂಪ್ ಕುಮಾರ್, ವಿಜಯ, ಸಿದ್ದರಾಜು, ಪ್ರಮುಖರುಗಳಾದ ಗಣೇಶ್, ಗೋವಿಂದಸ್ವಾಮಿ ಉಪಸ್ಥಿತರಿದ್ದರು.