ವೀರಾಜಪೇಟೆ, ಸೆ. 26: ಕರ್ನಾಟಕ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಇತ್ತೀಚೆಗೆ ಮೈಸೂರಿನಲ್ಲಿ ನಡೆದ 24ನೇ ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ವೀರಾಜಪೇಟೆಯ ಎಂ.ಡಿ. ಆಯುಷ್ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಈತ ಮೈಸೂರಿನಲ್ಲಿ ನಡೆದ ಅಮರ ಕಲಾ ಅಕಾಡೆಮಿ ಆಶ್ರಯದ ಶಾಸ್ತ್ರೀಯ ಸಂಗೀತ, ಭಾವಗೀತೆ, ಚಲನ ಚಿತ್ರಗೀತೆಗಳ ಅಂತರ ಶಾಲಾ ಸ್ಪರ್ಧೆಗಳಲ್ಲಿಯೂ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದಿದ್ದಾರೆ. ಗೋಣಿಕೊಪ್ಪಲು ಕಾಪ್ಸ್ ಶಾಲೆಯ ವಿದ್ಯಾರ್ಥಿಯಾಗಿರುವ ಆಯುಷ್ ವೀರಾಜಪೇಟೆಯ ವೈದ್ಯ ಡಾ. ದೀಪಕ್ ಹಾಗೂ ಡಾ. ಸುಪ್ರಿಯಾ ದಂಪತಿಗಳ ಪುತ್ರ.