ಸುಂಟಿಕೊಪ್ಪ. ಸೆ. 26: ಅತಿವೃಷ್ಟಿಯಿಂದ ನೊಂದು ನಿರಾಶ್ರಿತರ ಕೇಂದ್ರಕ್ಕೆ ಸೇರಿದವರಿಗೆ ನೀಡಬೇಕಾಗಿರುವ ಅಕ್ಕಿ ಧಾನ್ಯವನ್ನು ತನ್ನ ಸಂಬಧಿಕರ ಮನೆಯಲ್ಲಿ ಶೇಖರಿಸಿಟ್ಟ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಕಂದಾಯ ಇಲಾಖೆಗೆ ದೂರು ನೀಡಿದ ಎಂಬ ಕಾಣರಕ್ಕಾಗಿ ದಾರಿ ಮಧ್ಯೆ ತಡೆದು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪುಕಾರಾಗಿದೆ. ತಾ.25 ರಂದು ಬೆಳಿಗ್ಗೆ ಗುಂಡುಗುಟ್ಟಿ ಅಂಗನವಾಡಿ ಕೇಂದ್ರದ ಬಳಿ ಬೈಕಿನಲ್ಲಿ ಬರುತ್ತಿರುವಾಗ ಹರದೂರು ಗ್ರಾ.ಪಂ. ಸದಸ್ಯ ಗೌತಮ್ ಶಿವಪ್ಪ ಕಾರಿನಲ್ಲಿ ತನ್ನ ಬೆಂಬಲಿಗರೊಂದಿಗೆ ಬಂದು ಅಡ್ಡ ಗಟ್ಟಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿರುವದಾಗಿ ಗರಗಂದೂರಿನ ಮಲ್ಲಿಕಾರ್ಜುನ ಕಾಲೋನಿ ನಿವಾಸಿ ನವೀನ್ ಪೊಲೀಸರಿಗೆ ದೂರು ನೀಡಿದ್ದಾರೆ. ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್ ಮೊಕದ್ದಮೆ ಸಂಖ್ಯೆ 144/2018 ಕಲಂ 341, 323,504, 506 ರೆ/ವಿ 34 ಐಪಿಸಿ ಯಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.