ಅಯೋಧ್ಯೆ ವಿವಾದ : ಇಂದು ಸುಪ್ರೀಂ ತೀರ್ಪು

ನವದೆಹಲಿ, ಸೆ. 26: ಬಹು ಚರ್ಚಿತ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಲಿದೆ. ಮಸೀದಿಯು ಇಸ್ಲಾಮ್‍ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಕಿ ತೀರ್ಪನ್ನು ಪರಿಶೀಲನೆಗಾಗಿ ದೊಡ್ಡ ಸಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕೆ ಅಥವಾ ಬೇಡವೆ ಎನ್ನುವ ಕುರಿತು ಸುಪ್ರೀಂ ತೀರ್ಪು ಪ್ರಕಟಿಸಲಿದೆ. ಸಿಜೆಐ ನೇತೃತ್ವದ ಮೂರು-ನ್ಯಾಯಾಧೀಶರ ಪೀಠವು 1994 ರಲ್ಲಿ ತಾನು ನಿಡಿದ್ದ ತೀರ್ಪು ‘ಮಸೀದಿಗಳಲ್ಲಿ ನಮಾಜ್ ಮಾಡುವದು ಇಸ್ಲಾಂನ ಅವಿಭಾಜ್ಯ ಭಾಗವಲ್ಲ’ ಎನ್ನುವ ಆದೇಶವನ್ನು ಪರಿಶೀಲನೆಗಾಗಿ ಸಾವಿಧಾನಿಕ ಪೀಠಕ್ಕೆ ಹಸ್ತಾಂತರ ಮಾಡಬೇಕೆ ಇಲ್ಲವೆ ಎನ್ನುವದನ್ನು ನಿರ್ಧರಿಸಲಿದೆ. 2010ರಲ್ಲಿ ಅಯೋಧ್ಯೆಯ ವಿವಾದಿತ ಪ್ರದೇಶವನ್ನು ಮೂರು ಭಾಗವಾಗಿ ವಿಂಗಡಿಸಿಸ್ ಅಲಹಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು ನಾಳಿನ ತೀರ್ಪು ಇದರ ಭಾಗವಾಗಿ ಹೊರಬರಲಿದೆ.

ಲಷ್ಕರ್ ಟಾಪ್ ಕಮಾಂಡರ್ ಬಲಿ

ಶ್ರೀನಗರ, ಸೆ. 26: ಉತ್ತರ ಕಾಶ್ಮೀರದಲ್ಲಿ ಹತ್ಯೆಯಾದ ಇಬ್ಬರು ಉಗ್ರರ ಪೈಕಿ ಓರ್ವ ಲಷ್ಕರ್-ಇ-ತೊಯಿಬಾ (ಎಲ್‍ಇಟಿ) ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಆಗಿದ್ದು, ಕಳೆದ ಮೂರು ವರ್ಷಗಳಿಂದ ಕಣಿವೆ ರಾಜ್ಯದಲ್ಲಿ ಸಕ್ರಿಯವಾಗಿದ್ದ ಎಂದು ಪೆÇಲೀಸರು ತಿಳಿಸಿದ್ದಾರೆ. ಎಲ್‍ಇಟಿ ಟಾಪ್ ಕಮಾಂಡರ್ ಅಬು ಮಾಝ್ ಎಂದು ಗುರುತಿಸಲಾಗಿದ್ದು, ಈ ಉಗ್ರ ಪಾಕಿಸ್ತಾನದ ಪ್ರಜೆ ಎಂದು ಪೆÇಲೀಸರು ಹೇಳಿದ್ದಾರೆ. ಹತ್ಯೆಯಾದ ಉಗ್ರರ ಬಳಿ ಸಿಕ್ಕ ವಸ್ತುಗಳಿಂದ ಅವರ ಗುರುತು ಪತ್ತೆ ಹಚ್ಚಲಾಗಿದ್ದು, ಅಬು ಮಾಝ್ ಪಾಕಿಸ್ತಾನ ಮೂಲದ ಎಲ್‍ಇಟಿ ಕಮಾಂಡರ್ ಆಗಿದ್ದು, ಕಳೆದು ಮೂರು ವರ್ಷಗಳಿಂದ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಎಂದು ಪೆÇಲೀಸ್ ವಕ್ತಾರರು ತಿಳಿಸಿದ್ದಾರೆ. ಹತ್ಯೆಯಾದ ಮತ್ತೊಬ್ಬ ಉಗ್ರ ಅಬ್ದುಲ್ ಮಜೀದ್ ಮಿರ್ ಅಲಿಯಾಸ್ ಸಮೀರ್ ಎಂದು ಗುರುತಿಸಲಾಗಿದೆ. ನಿನ್ನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಬೋಮಾಯಿ ಪ್ರದೇಶದಲ್ಲಿ ಉಗ್ರರು ಅವಿತಿರುವ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿ, ಇಬ್ಬರು ಉಗ್ರರನ್ನು ಎನ್‍ಕೌಂಟರ್ ಮಾಡಿತ್ತು.

ರಾಜ್ಯ ಸರ್ಕಾರದ ಉದ್ಯೋಗ ಮೇಳ

ಬೆಂಗಳೂರು, ಸೆ. 26: ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರದ ವತಿಯಿಂದ ಇದೇ ತಾ. 29, 30 ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಈ ಉದ್ಯೋಗ ಮೇಳ ನಡೆಯಲಿದ್ದು ಜನತಾ ದರ್ಶನದ ಸಮಯದಲ್ಲಿ ಉದ್ಯೋಗಕ್ಕಾಗಿ ಮನವಿ ಮಾಡಿರುವವರು ಇದರಲ್ಲಿ ಭಾಗವಹಿಸಬಹುದು ಎಂದು ಕರ್ನಾಟಕ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ತಾ. 29 ಹಾಗೂ 30 ರಂದು ಉದ್ಯೋಗ ಮೇಳ ಏರ್ಪಡಿಸಲಾಗಿದ್ದು, ರಾಜ್ಯದ ವಿವಿಧ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸುತ್ತಿವೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ತಾ. 29 ಹಾಗೂ 30 ರಂದು ಉದ್ಯೋಗ ಮೇಳ ಏರ್ಪಡಿಸಲಾಗಿದ್ದು, ರಾಜ್ಯದ ವಿವಿಧ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸುತ್ತಿವೆ.

ರೂ. 2000 ಕೋಟಿ ಜಿಎಸ್‍ಟಿ ವಂಚನೆ

ಬೆಂಗಳೂರು, ಸೆ. 26: ದೇಶದಲ್ಲೇ ಬೃಹತ್ ಜಿಎಸ್‍ಟಿ ಹಗರಣವೊಂದು ಉದ್ಯಾನನಗರಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬರೋಬ್ಬರಿ ರೂ. 2000 ಕೋಟಿ ಮೌಲ್ಯದ ಹಗರಣವನ್ನು ಬೆಂಗಳೂರಿನ ತೆರಿಗೆ ಅಧಿಕಾರಿಗಳು ಪತ್ತೆ ಮಾಡಿದ್ದು ವಂಚಕ ವಿಕ್ರಮ್ ದುಗಾಲ್ ಎನ್ನುವವನನ್ನು ಬಂಧಿಸಿದ್ದಾರೆ. ದುಗಾಲ್ ನಕಲಿ ಬಿಲ್‍ಗಳನ್ನು ಸೃಷ್ಟಿಸುವ ಮೂಲಕ ಸುಮಾರು ಎರಡು ಸಾವಿರ ಕೋಟಿ ಮೊತ್ತದ ಸರಕು ಸೇವಾ ತೆರಿಗೆಗಳನ್ನು ವಂಚಿಸಿದ್ದನೆನ್ನಲಾಗಿದೆ. ಬೆಂಗಳೂರಿನ ಟಿ. ದಾಸರಹಳ್ಳಿ, ಚಿಕ್ಕ ಬಾಣಾವಾರ ಸೇರಿ ಹಲವು ಪ್ರದೇಶಗಳಲ್ಲಿ ಧಾಳಿ ನಡೆಸಿರುವ ವಾಣಿಜ್ಯ ತೆರಿಗೆ ಅಧಿಕಾರಿಗಳು ಹಲವು ದಾಖಲೆ, ಕಡತ ಹಾಗೂ ಲ್ಯಾಪ್ ಟಾಪ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಧಾಳಿ ಸಮಯದಲ್ಲಿ ಸುಮಾರು ರೂ. 203 ಕೋಟಿ ಮೊತ್ತದ ತೆರಿಗೆ ವಂಚನೆ ಮಾಡಿರುವ ನಕಲಿ ಬಿಲ್ ಸಹ ಪತ್ತೆಯಾಗಿದೆ. ಬಂಧಿತ ಆರೋಪಿಯಾದ ದುಗಾಲ್ ಎರಡು ಸಂಸ್ಥೆಗಳನ್ನು ನಡೆಸುತ್ತಿದ್ದು ಈತನ ಕಚೇರಿ ಹಾಗೂ ಮನೆಯಲ್ಲಿ ಒಟ್ಟು 14 ಸಂಸ್ಥೆಗಳಿಗೆ ಸೇರಿದ ನಕಲಿ ಬಿಲ್‍ಗಳು ಪತ್ತೆಯಾಗಿದೆ. ಎಂದರೆ ದುಗಾಲ್ ಬೇರೆಯವರ ಹೆಸರಲ್ಲಿ ಬರೋಬ್ಬರಿ 12 ಸಂಸ್ಥೆಗಳನ್ನು ನಡೆಸುತ್ತಿದ್ದರೆನ್ನುವದು ಪತ್ತೆಯಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

ಶ್ರೀಲಂಕಾ ಅಧ್ಯಕ್ಷರ ಹತ್ಯೆಗೆ ಸಂಚು

ಶ್ರೀಲಂಕಾ, ಸೆ. 26: ಶ್ರೀಲಂಕಾ ಅಧ್ಯಕ್ಷರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಭಾರತೀಯ ಪ್ರಜೆಯನ್ನು ಬಂಧಿಸಲಾಗಿದೆ. ಲಂಕ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಭಾರತೀಯ ಪ್ರಜೆಯಾದ ಎಂ.ಥಾಮಸ್ ಎಂಬುವವರನ್ನು ಭ್ರಷ್ಟಾಚಾರ ವಿರೋಧಿ ಆಂದೋಲನ ಕಾರ್ಯಾಚರಣೆಯ ನಿರ್ದೇಶಕ ನಮಲ್ ಕುಮಾರಾ ನಿವಾಸದಿಂದ ಬಂಧಿಸಲಾಗಿದ್ದು, ಸಿಐಡಿ ಮುಖ್ಯಸ್ಥ ರಂಜಿತ್ ಮುನಾಸಿಂಘೆ ಫೆÇೀರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಮಾಹಿತಿ ನೀಡಿದ್ದಾರೆ. ಥಾಮಸ್‍ನ್ನು ಹೆಚ್ಚಿನ ವಿಚಾರಣೆಗೊಳಪಡಿಸಲು ಮ್ಯಾಜಿಸ್ಟ್ರೇಟ್ ಜಯರತ್ನೆ ಸೂಚನೆ ನೀಡಿದ್ದಾರೆ. ಭಯೋತ್ಪಾದಕ ತನಿಖಾ ವಿಭಾಗದ ಮಾಜಿ ಉಸ್ತುವಾರಿಯಾಗಿದ್ದ ಡಿಐಜಿ ನಲಕ ಡೆ ಸಿಲ್ವ ಕುಮಾರ ಜೊತೆಗೆ ಸಿರಿಸೇನಾ ಅವರನ್ನು ಹತ್ಯೆ ಮಾಡುವ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಈ ವಿಚಾರದ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಥಾಮಸ್ ಹೆಸರೂ ಹೊರಬಂದಿದ್ದು ಸಂಚಿನ ಭಾಗವಾಗಿದ್ದ ಹಿನ್ನೆಲೆ ಆತನನ್ನು ಬಂಧಿಸಲಾಗಿದೆ.