ಕುಶಾಲನಗರ, ಸೆ. 25: ಮಕ್ಕಂದೂರು ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪಕ್ಕೆ ಒಳಗಾಗಿ ಕುಟುಂಬ ಸದಸ್ಯರ ಆಶ್ರಯದಲ್ಲಿ ನೆಲೆಸಿದ್ದ ವೃದ್ಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಕ್ಕಂದೂರು ಗ್ರಾಮದ ತಂತಿಪಾಲ ರಸ್ತೆಯ ನಿವಾಸಿ ರಾಮಣ್ಣ (75) ಅವರು ತಾ. 25 ರಂದು ಬೆಳಿಗ್ಗೆ ತನ್ನ ಪುತ್ರಿಯ ಮನೆಯಲ್ಲಿ ಮೃತರಾಗಿದ್ದು ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಭೂಕುಸಿತದ ಹಿನ್ನೆಲೆಯಿಂದ ಅವರು ಸ್ವಲ್ಪಕಾಲ ಮಡಿಕೇರಿ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು.

ನಂತರ ಕುಶಾಲನಗರದಲ್ಲಿರುವ ತನ್ನ ಪುತ್ರನ ನಿವಾಸದಲ್ಲಿ ಆಶ್ರಯ ಪಡೆದು ನಿನ್ನೆಯಷ್ಟೆ ಮಕ್ಕಂದೂರಿನ ತನ್ನ ಪುತ್ರಿಯ ಮನೆಗೆ ಬಂದು ತನ್ನ ಮನೆಯ ಸ್ಥಿತಿಗತಿ ನೋಡಿ ಅಸ್ವಸ್ಥರಾಗಿದ್ದರು ಎಂದು ಪುತ್ರ ರಘು ತಿಳಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಡೆಯಿತು.