ಮಡಿಕೇರಿ, ಸೆ. 24: ಕಳಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರಿಗೆ ಪ್ರಾಧಿಕಾರ ಕಚೇರಿಯ ಬಳಿ ನಿವೇಶನದಲ್ಲಿ; ಇತ್ತೀಚೆಗೆ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಒದಗಿಸುವ ದಿಸೆಯಲ್ಲಿ ಮಾದರಿ ಮನೆಗಳ ಕಾರ್ಯಕ್ಕೆ ಚಾಲನೆ ದೊರೆತಿದೆ. ಜಿಲ್ಲಾಡಳಿತದ ಸಲಹೆ ಮೇರೆಗೆ ಬೇರೆ ಬೇರೆ ಮೂರು ಉದ್ದಿಮೆಗಳು ಈ ಮಾದರಿ ಮನೆಗಳ ನಿರ್ಮಾಣದಲ್ಲಿ ತೊಡಗಿವೆ.ಆಧುನಿಕ ತಂತ್ರಜ್ಞಾನದೊಂದಿಗೆ ಹಗುರ ಮತ್ತು ಸುಸಜ್ಜಿತ ಕ್ರಮದಿಂದ ಪ್ರಾಕೃತಿಕ ವಿಪತ್ತು ಎದುರಾದರೂ ಹೆಚ್ಚಿನ ಹಾನಿ ಉಂಟಾಗದಂತೆ ಗಮನವಿರಿಸಿಕೊಂಡು ಈ ಮನೆಗಳ ನಿರ್ಮಾಣ ಕಾರ್ಯ ಮಾಡಲಾ ಗುವದು ಎಂದು ಸಂಬಂಧಿಸಿದ ಉದ್ದಿಮೆಗಳ ಪ್ರಮುಖರು ಸುಳಿವು ನೀಡಿದ್ದಾರೆ.ತೀರಾ ಕಡಿಮೆ ರೀತಿಯ ಕೇವಲ ರೂ. 6 ಲಕ್ಷದಷ್ಟು ವೆಚ್ಚದಿಂದ ಶೌಚಾಲಯ, ಸ್ನಾನಗೃಹ, ಅಡುಗೆ ಕೋಣೆ, ಮುಖ್ಯದ್ವಾರ ಕೊಠಡಿ ಸಹಿತ ಒಂದು ಮಲಗುವ ಕೋಣೆ ಸಹಿತ ನಿರ್ಮಿಸುವ ಮನೆಯ ಮಾದರಿಯನ್ನು ‘ಕುಯ್ಕ್ ಬಿಲ್ಡ್’ ಎಂಬ ಬೆಂಗಳೂರಿನ ಉದ್ದಿಮೆ ರೂಪಿಸುತ್ತಿದೆ. ಥರ್ಮ ಕೋಲ್ ಸಹಿತ ಸ್ಟೀಲ್ ಇತ್ಯಾದಿ ಬಳಸಿ ಸಿಮೆಂಟ್ ಪ್ಲಾಸ್ಟರ್&divound; Éೂಂದಿಗೆ ರೂಫಿಂಗ್ ಹಾಗೂ ಗೋಡೆಗಳ ನಿರ್ಮಾಣದಿಂದ ಈ ಮನೆಯು ರೂಪುಗೊಳ್ಳಲಿದೆ.

ಅಂತೆಯೇ ರಾಜೀವ್‍ಗಾಂಧಿ ಗೃಹ ನಿರ್ಮಾಣ ನಿಗಮದ ಅಂಗ ಸಂಸ್ಥೆ ‘ಕರ್ನಾಟಕ ಸ್ಟೇಟ್ ಹೆಬಿಟೇಟ್ ಸೆಂಟರ್’ ವತಿಯಿಂದ ರೂ. 6.50 ಲಕ್ಷ ಅಂದಾಜು ವೆಚ್ಚದಲ್ಲಿ ಒಂದು ಮಲಗುವ ಕೋಣೆ ಸಹಿತ ಇತರ ಸೌಲಭ್ಯಗಳೊಂದಿಗೆ ಇದೇ ಮೇಲಿನಂತೆ ಹಗುರ ಮತ್ತು ಸುರಕ್ಷಿತ ರೀತಿಯ ಒಂದು ಮನೆ ಮಾದರಿಯಾಗಿ ರೂಪುಗೊಳ್ಳುತ್ತಿದೆ. ಭವಿಷ್ಯದಲ್ಲಿ ಮೇಲಂತಸ್ತು ನಿರ್ಮಿಸಿಕೊಳ್ಳುವಷ್ಟು ಈ ಕಟ್ಟಡ ಸಾಮಥ್ರ್ಯ ಹೊಂದಿರುವದಾಗಿ ಹೇಳಲಾಗುತ್ತಿದೆ.

ಮತ್ತೊಂದು ಮಾದರಿ ಮನೆಯು ಹೆಂಚು ಮಾಡು ಸಹಿತ ಮಾಮೂಲಿ ಯಂತೆ ಸಾಕಷ್ಟು ಸುರಕ್ಷತಾ ದೃಷ್ಟಿ ಯಿಂದ ನಿರ್ಮಾಣಗೊಳ್ಳುತ್ತಿದೆ. ಈ ಮಾದರಿ ಮನೆಯನ್ನು ಕೂಡ ‘ಆರ್.ವಿ. ಟೈಫೆಕ್’ ಎಂಬ ಸಂಸ್ಥೆ ನಿರ್ಮಿಸುತ್ತಿದ್ದು, ಎಲ್ಲ ಮೂಲಭೂತ ಸೌಕರ್ಯ ಗಳೊಂದಿಗೆ ಸುಮಾರು ರೂ. 9 ಲಕ್ಷ ವೆಚ್ಚವಾಗಲಿದೆ

(ಮೊದಲ ಪುಟದಿಂದ) ಎಂದು ಅಂದಾಜಿಸ ಲಾಗಿದೆ. ಅಲ್ಲದೆ ಈ ಮನೆಯು 2 ಮಲಗುವ ಕೋಣೆ ಸಹಿತ ಇತರ ಸೌಲಭ್ಯ ಹೊಂದಿರಲಿದೆ. ಅಲ್ಲದೆ ದೆಹಲಿಯ ನಾಲ್ಕನೇ ಸಂಸ್ಥೆ ಯೊಂದು ಕೂಡ ಜಿಲ್ಲಾಡಳಿತವನ್ನು ಸಂಪರ್ಕಿಸಿ, ಆಧುನಿಕ ತಂತ್ರಜ್ಞಾನ ದೊಂದಿಗೆ ಕಡಿಮೆ ವೆಚ್ಚದ ಸುರಕ್ಷಿತ ಮನೆಗಳ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿ, ಅವಕಾಶ ಕಲ್ಪಿಸಲು ಕೋರಿರುವದಾಗಿ ತಿಳಿದು ಬಂದಿದೆ. ಒಟ್ಟಿನಲ್ಲಿ ಸದ್ಯದಲ್ಲೇ ಪೂರ್ಣಗೊಳ್ಳಲಿರುವ ಮಾದರಿ ಮನೆಗಳನ್ನು ಸಂತ್ರಸ್ತರ ಕುಟುಂಬಗಳಿಗೆ ತೋರಿಸಿ, ಜಿಲ್ಲಾಡಳಿತ ಗುಣಮಟ್ಟ ಖಾತರಿಪಡಿಸಿಕೊಂಡು ಆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿರುವದಾಗಿ ಗೊತ್ತಾಗಿದೆ.