ಸೋಮವಾರಪೇಟೆ, ಸೆ. 23: ಇಲ್ಲಿನ ಜೇಸೀಐ ಪುಷ್ಪಗಿರಿ ಹಿಲ್ಸ್‍ಗೆ ರಾಷ್ಟ್ರೀಯ ಪೂರ್ವಾಧ್ಯಕ್ಷರು ಹಾಗೂ ಅಂತರ್ರಾಷ್ಟ್ರೀಯ ತರಬೇತುದಾರ ಸೆನೆಟರ್ ರಮೇಶ್ ಭಟಾವಿಯಾ ಅವರು ಭೇಟಿ ನೀಡಿ, ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.

ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿದ ರಮೇಶ್ ಭಟಾವಿಯಾ ಅವರು, ಸಮಯ ಪ್ರಜ್ಞೆ ಮತ್ತು ಶಿಸ್ತಿಗೆ ಜೇಸೀ ಸದಸ್ಯರು ಪ್ರಥಮ ಆದ್ಯತೆ ನೀಡಬೇಕು. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಜೇಸೀ ಸಹಕಾರಿಯಾಗಿದೆ ಎಂದರು.

ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂತ್ರಸ್ತರಾಗಿರುವ ಹರಗ ಗ್ರಾಮದ ಈರ್ವರಿಗೆ ತಲಾ 10 ಸಾವಿರ ಸಹಾಯ ಧನ ಮತ್ತು ದಿನೋಪಯೋಗಿ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜೇಸೀ ಸಂಸ್ಥೆಯ ಅಧ್ಯಕ್ಷ ಕೆ.ಎ. ಪ್ರಕಾಶ್, ಕಾರ್ಯದರ್ಶಿ ಎಂ.ಎ. ರುಬೀನಾ, ನಿಕಟಪೂರ್ವ ಅಧ್ಯಕ್ಷ ಮನೋಹರ್, ವಲಯ ಉಪಾಧ್ಯಕ್ಷೆ ಮಮತ, ಜೇಸೀರೇಟ್ ಅಧ್ಯಕ್ಷೆ ಮಹೇಶ್ವರಿ ಗಿರೀಶ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.