*ಸುಂಟಿಕೊಪ್ಪ, ಸೆ. 23: ಕೊಡಗಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ತೋಟಗಾರಿಕಾ ಬೆಳೆಗಳಾದ ಕಾಫಿ, ಕರಿಮೆಣಸು, ಏಲಕ್ಕಿ, ಬಾಳೆ, ಅಡಿಕೆ. ಕಿತ್ತಳೆ ಬೆಳೆಗಳು ಕೊಳೆತು ನೆಲಕಚ್ಚಿರುವ ನಷ್ಟದ ಬಗ್ಗೆ ಕಂದಾಯ ಇಲಾಖೆಯಿಂದ ಸರ್ವೆ ನಡೆಸಿ ಪರಿಶೀಲಿಸಲಾಯಿತು.

ದಾವಣಗೆರೆಯ ಕೃಷಿ ಅಧಿಕಾರಿಗಳಾದ ವೀರೇಶ್ ಕಲ್ಮನಿ ಮತ್ತು ಟಿ.ಹೆಚ್. ಸುಂದರ್ ಇವರ ನೇತೃತ್ವದಲ್ಲಿ ಗರಗಂದೂರು ಗ್ರಾಮದ ಜಿ.ಇ. ಸೋಮಶೇಖರ್, ಪ್ರವೀಣ್ ಕುಮಾರ್, ಕುಂಜಿಲನ ಡಿ. ಕಾರ್ಯಪ್ಪ, ಹಾಗೂ ರಹೀಂ ತೋಟ ಮತ್ತು ಇತರ ಸುತ್ತಮುತ್ತಲಿನ ತೋಟಗಳಲ್ಲಿ ಸರ್ವೆ ಕಾರ್ಯ ನಡೆಸಿದರು.

ಈ ಸಂದರ್ಭ ಸುಂಟಿಕೊಪ್ಪ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ನಾಗೇರಾವ್, ಹರದೂರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಬಿ. ರವಿ, ಅರಣ್ಯ ಇಲಾಖೆ, ಸಿಬ್ಬಂದಿ ಚಂದ್ರನ್ ಹಾಜರಿದ್ದರು.