ಮಡಿಕೇರಿ, ಸೆ. 23: ಪಂಡಿತ್ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆಯಡಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ(ಕೆ.ಎಸ್.ಆರ್.ಎಲ್.ಪಿ.ಎಸ್)ನಿಂದ ಗ್ರಾಮೀಣ ಯುವಜನರಿಗೆ ಕೌಶಲ್ಯ ತರಬೇತಿ ನೀಡಿ ಕಡ್ಡಾಯವಾಗಿ ಉದ್ಯೋಗ ಒದಗಿಸುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವದರಿಂದ ತಾ. 25 ರಂದು ಬೆಳಿಗ್ಗೆ 11 ಗಂಟೆಗೆ ಜಿ.ಪಂ. ಸಿಇಒ ನೇತೃತ್ವದಲ್ಲಿ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಅಂತ್ಯೋದಯ ದಿನಾಚರಣೆ ನಡೆಯಲಿದೆ.

ಕಾರ್ಯಕ್ರಮಕ್ಕೆ ಪ್ರತಿ ತಾಲೂಕಿನಿಂದ ಈಗಾಗಲೇ ಡಿ.ಡಿ.ಯು.ಜಿ.ಕೆ.ವೈ ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ ಹಾಗೂ ಹೊಸದಾಗಿ ನೋಂದಾವಣಿಗೆ ಇಚ್ಛಿಸಿರುವ 50 ಅಭ್ಯರ್ಥಿಗಳನ್ನು ತಪ್ಪದೇ ಕಳುಹಿಸುವಂತೆ ಜಿ.ಪಂ. ಡಿ.ಆರ್.ಡಿ.ಎ. ಕೋಶದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.