ಗೋಣಿಕೊಪ್ಪ ವರದಿ, ಸೆ. 23 : ಪಾಲಿಬೆಟ್ಟ ಚೆಷೈರ್ ಹೋಂ ಅಂಗವಿಕಲ ಶಾಲೆಯ ಆವರಣದಲ್ಲಿ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ಎನ್‍ಎಸ್‍ಎಸ್ ಸೇವಕರು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಿದರು.

ಆವರಣದಲ್ಲಿನ ಕಸ ಕಡ್ಡಿ ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭ ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಎ. ಸಿ. ಗಣಪತಿ, ಎನ್‍ಎಸ್‍ಎಸ್ ಯೋಜನಾಧಿಕಾರಿಗಳಾದ ವನೀತ್‍ಕುಮಾರ್, ರೀತಾ, ಚೆಷೈರ್ ಹೋಂ ಶಿಕ್ಷಕ ಶಿವರಾಜ್ ಉಪಸ್ಥಿತರಿದ್ದರು.