*ಗೋಣಿಕೊಪ್ಪಲು, ಸೆ. 23: ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ ಹಾನಿಗೀಡಾದ ಕುಟುಂಬಸ್ಥರಿಗೆ ನೆರವಾಗಲು ಪೊನ್ನಂಪೇಟೆ ಆಲೀರ ಕುಟುಂಬಸ್ಥರು ಪರಿಹಾರ ನಿಧಿಗೆ ರೂ. 30 ಸಾವಿರ ದೇಣಿಗೆ ನೀಡಿದರು.
ಪೊನ್ನಂಪೇಟೆ ಉಪತಹಶೀಲ್ದಾರ್ ರಾಧಾಕೃಷ್ಣ ಅವರಿಗೆ ಆಲೀರ ಕುಟುಂಬದ ಮೊಯ್ದು ಹಾಜಿ, ಆಲೀರ ಸಮದ್ ಚೆಕ್ ನೀಡಿದರು. ಹುದಿಕೇರಿ ಕಂದಾಯ ಪರಿವೀಕ್ಷಕ ನಿಶಾನ್, ಗ್ರಾಮ ಲೆಕ್ಕಿಗ ನಿತಿನ್, ಆಲೀರ ಹಮೀದ್, ಆಲೀರ ರಫೀಕ್, ಆಲೀರ ನಿಸಾರ್ ಹಾಜರಿದ್ದರು.