ಕೂಡಿಗೆ, ಸೆ. 23: ಪಂಡಿತ್ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆಯಡಿ ಗ್ರಾಮೀಣ ಯುವಜನರಿಗೆ ಕೌಶಲ್ಯ ತರಬೇತಿ ನಂತರ ಕಡ್ಡಾಯ ಉದ್ಯೋಗ ಒದಗಿಸುವ ಹೋಬಳಿ ಮಟ್ಟದ ಕಾರ್ಯಕ್ರಮ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಣ್ಣಪ್ಪ ಉದ್ಘಾಟಿಸಿದರು. ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಸೋಮವಾರ ಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಿ.ಬಿ. ಸುನೀಲ್‍ಕುಮಾರ್ ಮಾತನಾಡಿ, ಪಂಡಿತ್ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆಯಡಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಿಂದ ಗ್ರಾಮೀಣ ಯುವಜನತೆಗೆ ಕೌಶಲ್ಯ ತರಬೇತಿ ನೀಡಿ ಕಡ್ಡಾಯ ಉದ್ಯೋಗಕ್ಕೆ ಒಳಪಡಿಸುವ ಮಹತ್ವಾಕಾಂಕ್ಷೆಯ ಯೋಜನೆ ಅನುಷ್ಠಾನದತ್ತ ಮಹತ್ವದ ಹೆಜ್ಜೆಗಳನ್ನು ಹಾಕುತ್ತಿದೆ.

ಗ್ರಾಮೀಣ ಯುವ ಜನತೆಯನ್ನು ದೃಷ್ಟಿಯಲ್ಲಿರಿಸಿಕೊಂಡಿರುವ ನಿರುದ್ಯೋಗ ಸಮಸ್ಯೆಯ ಪರಿಹಾರಕ್ಕೆ

ಕೌಶಲ್ಯ ಯೋಜನೆಯಡಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಿಂದ ಗ್ರಾಮೀಣ ಯುವಜನತೆಗೆ ಕೌಶಲ್ಯ ತರಬೇತಿ ನೀಡಿ ಕಡ್ಡಾಯ ಉದ್ಯೋಗಕ್ಕೆ ಒಳಪಡಿಸುವ ಮಹತ್ವಾಕಾಂಕ್ಷೆಯ ಯೋಜನೆ ಅನುಷ್ಠಾನದತ್ತ ಮಹತ್ವದ ಹೆಜ್ಜೆಗಳನ್ನು ಹಾಕುತ್ತಿದೆ.

ಗ್ರಾಮೀಣ ಯುವ ಜನತೆಯನ್ನು ದೃಷ್ಟಿಯಲ್ಲಿರಿಸಿಕೊಂಡಿರುವ ನಿರುದ್ಯೋಗ ಸಮಸ್ಯೆಯ ಪರಿಹಾರಕ್ಕೆ ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮದ ರೂಪುರೇಷೆಗಳನ್ನು ತರಬೇತಿಯಲ್ಲಿ ಪಾಲ್ಗೊಳ್ಳುವ ಯುವಕ-ಯುವತಿಯರಿಗೆ ಅವಶ್ಯಕವಾಗಿರುವ ದಾಖಲೆ ಪತ್ರಗಳ ಸೂಚನೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸದಸ್ಯರಾದ ಪಾರ್ವತಮ್ಮ ರಾಮೇಗೌಡ, ಸಾವಿತ್ರಿ ರಾಜು, ಈರಪ್ಪ, ಜ್ಯೋತಿ ಪ್ರಮೀಳಾ, ಶಿಲ್ಪ, ಜಯಮ್ಮ, ಮಂಜುನಾಥ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯೆಷಾ, ಕೂಡಿಗೆ ಪಿಡಿಓ ಅಶ್ವಿನಿ, ಹೆಬ್ಬಾಲೆ ಪಿಡಿಓ ರಾಕೇಶ್, ತೊರೆನೂರು ಪಿಡಿಓ ಸಂತೋಷ್, ಶಿರಂಗಾಲ ಗ್ರಾಮ ಪಂಚಾಯಿತಿ ಪಿಡಿಓ ಹರೀಶ್, ನೆಲ್ಲಿಹುದಿಕೇರಿ ಹಾಗೂ ಗುಡ್ಡೆಹೊಸೂರು ಪಂಚಾಯಿತಿ ಪಿಡಿಓಗಳು ಇದ್ದರು.