ಮಡಿಕೇರಿ, ಸೆ. 23: ಮೆ. ಈಗಲ್ ಡಿಟೆಕ್ಟಿವ್ ಏಜೆನ್ಸಿ, ಲ್ಯಾಂಗ್‍ಫರ್ಡ್ ರಸ್ತೆ, ಬೆಂಗಳೂರು ಸಂಸ್ಥೆಯ ಚೇರ್‍ಮೆನ್ ಮುಕ್ಕಾಟಿರ ಎಂ. ಅಣ್ಣಯ್ಯ, ವ್ಯವಸ್ಥಾಪಕ ನಿರ್ದೇಶಕ ಎಂ.ಎ. ಕರುಣ್ ತಿಮ್ಮಯ್ಯ ಹಾಗೂ ಕ್ಯಾಪ್ಟನ್ ಮಲ್ಲಿಕಾರ್ಜುನ್ ಇವರು ಬೆಂಗಳೂರು ಕೊಡವ ಸಮಾಜ ಪ್ಲಡ್ ರಿಲೀಫ್ ಫಂಡ್‍ಗೆ ದೇಣಿಗೆ ನೀಡಿದರು. ರೂ. 2 ಲಕ್ಷಗಳನ್ನು ಕೊಡವ ಸಮಾಜದ ಅಧ್ಯಕ್ಷರಿಗೆ ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.