ಮಡಿಕೇರಿ, ಸೆ. 23: ಗುಡ್ಡೆಹೊಸೂರು ಗ್ರಾ.ಪಂ. 2018-19ನೇ ಸಾಲಿನ ಗ್ರಾಮಸಭೆಯು ತಾ. 25 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ಅಧ್ಯಕ್ಷತೆಯಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ಕಚೇರಿ ಹಿಂಭಾಗದ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಗುಡ್ಡೆಹೊಸೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.