ನಾಪೋಕ್ಲು, ಸೆ. 23: ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಕೊಡವ ಸಮಾಜದಲ್ಲಿ ತಾ. 25 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಸಂದರ್ಭ ನಿವೃತ್ತ ಶಿಕ್ಷಕಿ ಬಿ.ಎಂ. ಪದ್ಮಜಾ ಅವರನ್ನು ಸನ್ಮಾನಿಸಲಾಗುವದು. ಲಯನ್ಸ್ ಕ್ಲಬ್ ವಿಭಾಗಿಯ ಅಧ್ಯಕ್ಷ ಲಯನ್ ಪಿ.ಎನ್. ಬೋಸ್ ಪೆಮ್ಮಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಎಂ. ವಿನಯ್ ಕಾರ್ಯದರ್ಶಿ ಕೆ.ಸಿ. ತಿಮ್ಮಯ್ಯ ಹಾಗೂ ಖಜಾಂಚಿ ಬಿ.ಎಸ್. ಬಿದ್ದಪ್ಪ, ಕ್ಲಬ್‍ನ ಸದಸ್ಯರು ಉಪಸ್ಥಿತರಿರುವರು.