ಸುಂಟಿಕೊಪ್ಪ, ಸೆ. 22: ಕೊಡಗು ಅತಿವೃಷ್ಟಿಪೀಡಿತÀ 32 ಗ್ರಾಮಗಳ ಎಲ್ಲಾ ರೈತರ ಹಾಗೂ ಬೆಳೆಗಾರರ ವಾಣಿಜ್ಯ ಬ್ಯಾಂಕಿನ ಮತ್ತು ಸಹಕಾರ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ತೋಟ ಹಾಗೂ ಗದ್ದೆಯನ್ನು ಪುನರ್ ಅಭಿವೃದ್ಧಿಪಡಿಸಲು 5 ವರ್ಷದವರೆಗೆ ಬಡ್ಡಿ ರಹಿತ ಸಾಲ ನೀಡಬೇಕೆಂದು ತಾ. 28 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟ ಹಾಗೂ ಕೊಡಗು ಕಾಫಿ ಬೆಳೆಗಾರರ ಸಂಘದಿಂದ (ಸಿಪಿಎ) ತೀರ್ಮಾನಿಸಲಾಯಿತು.ಇಲ್ಲಿನ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಮಾದಾಪುರ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮಂಡೇಪಂಡÀ ಪಿ. ಮನುಮೇದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ನೆರೆ ಹಾವಳಿ ಹಾಗೂ ಭೂ ಕುಸಿತಕ್ಕೆ ಸಿಲುಕಿದ (ಮೊದಲ ಪುಟದಿಂದ) ಸಂತ್ರಸ್ತರ ಸಭೆಯಲ್ಲಿ ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಜಯರಾಮ್ ಮಾತನಾಡಿ, ಕೊಡಗಿನಲ್ಲಿ ಹಿಂದೆಂದೂ ಕಂಡÀರಿಯದ ನಷ್ಟ ಅತಿವೃಷ್ಟಿ ಜಲಪ್ರಳಯದಿಂದ ಆಗಿದೆ.

ಕೇಂದ್ರ ಸರಕಾರ ವಿದರ್ಭ ಪ್ಯಾಕೇಜ್ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ನೀಡಿದರೆ ಸಂತ್ರಸ್ತರ ಬದುಕು ಹಸನಾಗಬಹುದು. ಕೇಂದ್ರ ಸರಕಾರಕ್ಕೆ ಕಾಫಿ, ಕರಿಮೆಣಸಿನಿಂದ 3808 ಕೋಟಿ ವಿದೇಶ ವಿನಿಮಯ ಹರಿದು ಬರುತ್ತಿದೆ. ಈ ಸಾಲಿನಲ್ಲಿ 82,000 ಟನ್ ಕಾಫಿ ಫಸಲು ಹಾಸನ, ಕೊಡಗು, ಚಿಕ್ಕಮಗಳೂರು ಈ ಭಾಗದಲ್ಲಿ ಕುಂಠಿತಗೊಂಡಿದೆ. ಕೇಂದ್ರ ಸರಕಾರ ಪಕೃತಿ ವಿಕೋಪ ಯೋಜನೆಯಡಿ 50,000 ರೂ. ನೀಡಿ ಕೈ ತೊಳೆದುಕೊಂಡಿದೆ. ಇದರಿಂದ ರೈತರ ಕಾಫಿ ಬೆಳೆಗಾರರ ಬದುಕು ಬೀದಿಗೆ ಬರಲಿದೆ. ಸರಕಾರ ನಮಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿದರು.

ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಅಪ್ಪನೆರವಂಡ ನಂದಾಬೆಳ್ಯಪ್ಪ ಮಾತನಾಡಿ, ಕಾಫಿ ಬೆಳೆಗಾರರಿಗೆ ಕಾಫಿ ಬೋರ್ಡಿನಿಂದ ಸರಿಯಾದ ಮಾರ್ಗದರ್ಶನ, ಪರಿಹಾರ ದೊರಕುತ್ತಿಲ್ಲ. ಬೆಳೆಗಾರರ ಹಿತ ಕಾಪಾಡುವ ಕಾಫಿ ಬೋರ್ಡ್, ಸಂಬಾರ ಮಂಡಳಿ ಬೆಳೆಗಾರರನ್ನು ಕತ್ತಲೆಯಲ್ಲಿ ಇಡುತ್ತಿದ್ದಾರೆ. ಈ ಬಗ್ಗೆ ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ಸಣ್ಣ ಮಧÀ್ಯಮ, ದೊಡ್ಡ ಬೆಳೆಗಾರರಿಗೆ ಹಾಗೂ ಮನೆ ಕಳೆದುಕೊಂಡ ಬಡವರಿಗೆ ನ್ಯಾಯಕ್ಕಾಗಿ ತಾ. 28 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದರು.

ಕಾಫಿ ಮಂಡಳಿ ಹಾನಿಗೊಳಗಾದ ಕಾಫಿ ತೋಟಗಳ ಸರ್ವೆ ಕಾರ್ಯ ನಡೆಸಿ ಸ್ಪಷ್ಟ್ಟವಾದ ಮೌಲ್ಯದ ಪರಿಹಾರವನ್ನು ನೀಡಬೇಕು. ಈ ಮೊತ್ತ ಒಂದೇ ಕಂತಿನಲ್ಲಿ ಬಿಡುಗಡೆ ಯಾಗಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಪ್ರೀತಮ್ ಕಾವೇರಪ್ಪ. ಕಾನೂನು ಸಲಹೆಗಾರ ರತನ್ ತಮ್ಮಯ್ಯ. ಸಿಪಿಎ ಕಾರ್ಯದರ್ಶಿ ಕುಕ್ಕೇರ ಜಯಚಿಣ್ಣಪ್ಪ, ಹಾಸನ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಮಕ್ಕಂದೂರು ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್. ರಮೇಶ್, ನಿವೃತ್ತ ಡಿವೈಎಸ್‍ಪಿ ಪೂಣಚ್ಚ ಇತರರು ಹಾಜರಿದ್ದರು.